Thursday, January 23, 2025
ಸುದ್ದಿ

ಜೆಸಿಐ ನೆಕ್ಕಿಲಾಡಿ ಘಟಕದ ವತಿಯಿಂದ ನಡೆದ ಎಂಪವರಿಂಗ್ ಯೂತ್ ತರಬೇತಿ ಕಾರ್ಯಕ್ರಮ – ಕಹಳೆ ನ್ಯೂಸ್

ವಳಾಲು: ಜೆಸಿಐ ನೆಕ್ಕಿಲಾಡಿ ಘಟಕದ ವತಿಯಿಂದ ಜುಲೈ 25 ರಂದು ಸರಕಾರಿ ಪ್ರೌಢಶಾಲೆ ವಳಾಲು ಬಜತ್ತೂರು ಇಲ್ಲಿನ ವಿದ್ಯಾರ್ಥಿಗಳಿಗೆ ಎಂಪವರಿಂಗ್ ಯೂತ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷ ಮುಕುಂದ ಬಜತ್ತೂರು ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ವಸಂತ ಗೌಡ, ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ಉಪಸ್ಥಿತರಿದ್ದರು. ತರಬೇತುದಾರರಾಗಿ ಜೇಸಿ ರವೀಂದ್ರ ದರ್ಬೆ, ಜೇಸಿ ನವೀನ್ ಕೊಯಿಲ ಹಾಗೂ ಜೆಸಿ ಕಾರ್ತಿಕ್ ಶಾಸ್ತ್ರಿ ಭಾಗವಹಿಸಿದ್ದರು.

ಜೆಸಿಐ ನೆಕ್ಕಿಲಾಡಿ ಘಟಕದ ಅಧ್ಯಕ್ಷ ಜೆಸಿ ವಿನೀತ್ ಶಗ್ರಿತ್ತಾಯ, ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಕಿ ಪುಷ್ಪಾ ತಿಲಕ್ ವಂದನಾರ್ಪಣೆಯನ್ನು ಮಾಡಿದರು. ನಿಕಟಪೂರ್ವ ಅಧ್ಯಕ್ಷೆ ಜೆಸಿ ಅಮಿತಾ ಹರೀಶ್ ಹಾಗೂ ಶಾಲಾ ಶಿಕ್ಷಕ-ಶಿಕ್ಷಕಿ ವೃಂದದವರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.