Wednesday, January 22, 2025
ಸುದ್ದಿ

ಕಾಶ್ಮೀರದಲ್ಲಿ ಧೋನಿ ಸೇನಾ ಕರ್ತವ್ಯಕ್ಕೆ ಹಾಜರ್ – ಕಹಳೆ ನ್ಯೂಸ್

ಹೊಸದಿಲ್ಲಿ: ಕ್ರಿಕೆಟ್ ಅಂಗಳದಲ್ಲಿ ಚೆಂಡನ್ನು ಮೈದಾನದ ಗಡಿ ತಲುಪಿಸುತ್ತಾ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದ್ದ ಎಂ.ಎಸ್.ಧೋನಿ ಈಗ ಗಡಿಯನ್ನು ತಲುಪಿದ್ದಾರೆ. ಇಂದು ಕಾರ್ಗಿಲ್ ದಿನವಾದ ಕಾರಣ ಅವರು ಇಂದಿನಿಂದಲೇ ಸೇನಾ ಕಾರ್ಯಕ್ಕೆ ಸೇರ್ಪಡೆಗೊಂಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದಿನಿಂದ ಆ. 15ರ ವರೆಗೆ ಕಾಶ್ಮೀರದಲ್ಲಿ ಸೇನಾ ಕರ್ತವ್ಯ ನಿರ್ವಹಿಸಲಿದ್ದಾರೆ.

ಪ್ಯಾರಾಚೂಟ್ ರೆಜಿಮೆಂಟ್‍ನ 106ನೇ ಬೆಟಾಲಿಯನ್‍ನೊಂದಿಗೆ ಗಸ್ತು, ನಿಗಾ ಕಾರ್ಯಾಚರಣೆ ಸೇರಿದಂತೆ ಸೇನೆಯ ವಿವಿಧ ವಿಭಾಗದಲ್ಲಿ ಧೋನಿ ಕೆಲಸ ನಿರ್ವಹಿಸಲಿದ್ದಾರೆ. ಜತೆಗೆ ಅಷ್ಟೂ ಸಮಯ ಸೇನೆಯೊಂದಿಗೆ ಇರಲಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವೆಸ್ಟ್ ಇಂಡೀಸ್ ಸರಣಿಗೆ ಭಾರತ ತಂಡದ ಆಯ್ಕೆ ನಡೆಯುತ್ತಿರುವ ವೇಳೆಯಲ್ಲೇ ಧೋನಿ ಸೇನೆಯಲ್ಲಿ ಕರ್ತವ್ಯನಿರ್ವಹಿಸುವ ಸಲುವಾಗಿ 2 ತಿಂಗಳು ರಜೆ ತೆಗೆದುಕೊಂಡಿದ್ದರು. ಹೀಗಾಗಿ ವಿಂಡೀಸ್ ಪ್ರವಾಸದಿಂದ ಹೊರಗುಳಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು