ಪುಂಜಾಲಕಟ್ಟೆ : ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ಹಣವನ್ನು ಪಣಕ್ಕೆ ಇಟ್ಟು ಜುಗಾರಿ ಆಡುತ್ತಿದ್ದ ಗುಂಪಿನ ಮೇಲೆ ಪುಂಜಾಲಕಟ್ಟೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ದಾಳಿ ನಡೆಸಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ನೋವುಂಡ ಸರಕಾರಿ ಅರಣ್ಯ ಪ್ರದೇಶದ ಪಂಜಿ ಕುಡೇಲು ಎಂಬಲ್ಲಿ ಜುಗಾರಿ ಆಡುತ್ತಿದ್ದ ದಿಲೀಪ್, ಹರೀಶ್, ಇಕ್ಬಾಲ್, ಲತೀಫ್, ಶೇಖರ್, ಸತೀಶ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ಹಾಗೂ 1,53,370 ರೂ. ಮೌಲ್ಯದ ಆಟಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶೇಖರ ಆಚಾರಿ ಎಂಬವರನ್ನು ವಶಕ್ಕೆ ಪಡೆದಿದ್ದು, ಅವರಿಂದ ಇಸ್ಪೀಟು ಎಲೆಗಳು, ಪಣಕ್ಕೆ ಇಟ್ಟಿದ್ದ 1320/- ರೂ ಹಣ, ಇಸ್ಪೀಟ್ ಎಲೆಗಳು-52, ಟರ್ಫ್‍ಲ್-1, ಮೋಟಾರ್ ಸೈಕಲ್-2 ಹಾಗೂ ಒಂದು ಅಟೋರಿಕ್ಷಾವನ್ನು ವಶಕ್ಕೆ ಪಡೆಯಲಾಗಿದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆ 1963 ರಂತೆ ಪ್ರಕರಣ ದಾಖಲಾಗಿರುತ್ತದೆ. ದಾಳಿಯಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣೆ ಪಿಎಸ್‍ಐ ಸೌಮ್ಯ ಜೆ ಹಾಗೂ ಸಿಬ್ಬಂದಿ ನಾರಾಯಣ ಎಎಸ್‍ಐ ಮತ್ತು ಪಿ.ಸಿ ಗಳಾದ ಸಾಬು ಮಿರ್ಜಿ ಮತ್ತು ಹರೀಶ್ ಪಾಲ್ಗೊಂಡಿರುತ್ತಾರೆ.