Wednesday, January 22, 2025
ಸುದ್ದಿ

ಎರಡನೇ ಸುತ್ತಿನ ಭೂಮಿಯ ಪರಿಭ್ರಮಣೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಿದ ಚಂದ್ರಯಾನ-2- ಕಹಳೆ ನ್ಯೂಸ್

Sriharikota: India’s second Moon mission Chandrayaan-2 lifts off onboard GSLV Mk III-M1 launch vehicle from Satish Dhawan Space Center at Sriharikota in Andhra Pradesh, Monday, July 22, 2019. ISRO had called off the launch on July 15 after a technical snag was detected ahead of the lift off. (ISRO/PTI Photo) (PTI7_22_2019_000096B)

ನವದೆಹಲಿ: ಕಳೆದ 22ರಂದು ಉಡಾವಣೆಯಾದ ಚಂದ್ರಯಾನ-2 ಇಂದು ತನ್ನ ಎರಡನೇ ಭೂ ಪರಿಭ್ರಮಣ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ.

ನಿಗದಿತ ಯೋಜನೆಯಂತೆ ಇಂದು ಮಧ್ಯರಾತ್ರಿ 1 ಗಂಟೆ 8 ನಿಮಿಷಕ್ಕೆ 883 ಸೆಕೆಂಡ್ ವೇಗದಲ್ಲಿ ಕಂಪ್ಯೂಟರ್ ಚಾಲನಾ ವ್ಯವಸ್ಥೆಯಿಂದ ಎರಡನೇ ಸುತ್ತಿನ ಭೂ ಸ್ಥಿರ ಕಕ್ಷೆ ಪ್ರಯಾಣವನ್ನು ಪೂರ್ಣಗೊಳಿಸಿದೆ. ಭೂ ಸ್ಥಿರ ಕಕ್ಷೆಯಿಂದ ಉಪಗ್ರಹ ಈಗಾಗಲೇ 251*54829 ಕಿಲೋ ಮೀಟರ್ ಎತ್ತರದಲ್ಲಿ ಸಂಚರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಲಾ ಅಂತರಿಕ್ಷ ನಿಯತಾಂಕಗಳು ಸಹಜವಾಗಿವೆ ಎಂದು ಇಸ್ರೊ ಟ್ವೀಟ್ ಮಾಡಿದೆ. ಮೂರನೇ ಭೂ ಸ್ಥಿರ ಕಕ್ಷೆಯಿಂದ ನೌಕೆಯನ್ನು ಹೆಚ್ಚಿಸುವ ಕಾರ್ಯ ಇದೇ 29ರಂದು ಅಪರಾಹ್ನ 2.30ರಿಂದ 3.30ರ ನಡುವೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಂದ್ರಯಾನ-2 ಚಂದ್ರನಲ್ಲಿಗೆ ಆಗಸ್ಟ್ 20ರಂದು ತಲುಪಲಿದೆ. ಚಂದ್ರಯಾನ-2 ಮೂರು ಭಾಗಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಕಕ್ಷೆಗಾಮಿ(2,379 ಕೆಜಿ ತೂಕದ 8 ಪೇಲೋಡ್), ಲ್ಯಾಂಡರ್ ವಿಕ್ರಮ್(1,471 ಕೆಜಿ ತೂಕದ 4 ಪೇಲೋಡ್), ರೋವರ್ ಪ್ರಜ್ಞಾನ್(27 ಕೆಜಿ ತೂಕದ ಎರಡು ಪೇಲೋಡ್) ಗಳನ್ನು ಹೊಂದಿದೆ.

ಚಂದ್ರಯಾನ-2 ಮೊದಲ ಸುತ್ತಿನ ಭೂ ಪರಿಭ್ರಮಣೆಯನ್ನು ಕಳೆದ 24ರಂದು ಪೂರ್ಣಗೊಳಿಸಿತ್ತು. ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲ್ಮೈ ಮೇಲೆ ಸೆಪ್ಟೆಂಬರ್ 7ರಂದು ಇಳಿಯಲಿದೆ.