Tuesday, January 21, 2025
ಸುದ್ದಿ

ನೆಲ್ಲಿಕಳಯ: ಭಾರೀ ಮಳೆಗೆ ಮನೆ ಮಾಡು ಕುಸಿದು ಹಾನಿ – ಕಹಳೆ ನ್ಯೂಸ್

ಪೆರ್ಲ: ಭಾರೀ ಮಳೆಗೆ ಮನೆಯ ಮಾಡು ಕುಸಿದು ಹಾನಿ ಸಂಭವಿಸಿದ ಘಟನೆ ನೆಲ್ಲಿಕಳಯದಲ್ಲಿ ಸಂಭವಿಸಿದೆ. ಧಾರಾಕಾರ ಮಳೆಗೆ ಬದಿಯಡ್ಕ ಕುಂಟಾಲುಮೂಲೆ ಸಮೀಪದ ಕೃಷ್ಣ ನೆಲ್ಲಿಕಳಯ ಅವರ ಮನೆಯ ಮಾಡಿನ ಒಂದು ಪಾರ್ಶ್ವ ಕುಸಿದು ಬಿದ್ದಿದೆ. ಸುಮಾರು 20 ವರ್ಷದ ಮೊದಲು ನಿರ್ಮಿಸಿದ ಮನೆಯ ಹಂಚಿನ ಮಾಡಿನ ಮರದ ಪಕ್ಕಾಸು, ರೀಪುಗಳು ಮುರಿದು ಕುಸಿದು ಬಿದ್ದಿವೆ.

ಮುರಿದು ಬೀಳುವ ಶಬ್ದ ಕೇಳಿದ ಕೂಡಲೆ ಮನೆಯವರು ಹೊರಗೆ ಓಡಿದ ಕಾರಣ, ಯಾರಿಗೂ ಅಪಾಯ ಸಂಭವಿಸಲಿಲ್ಲ. ಮನೆಯಲ್ಲಿ ಎಂಟು ಜನರಿದ್ದು, ಕೃಷ್ಣ ಅವರ ತಂದೆ, ಪತ್ನಿ, ಇಬ್ಬರು ಪುಟ್ಟ ಮಕ್ಕಳು, ಅಕ್ಕ ಹಾಗೂ ಅವರ ಇಬ್ಬರು ಹೆಣ್ಮಕ್ಕಳು ಮನೆಯಲ್ಲಿದ್ದು, ಇದೀಗ ಹತ್ತಿರದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು