ಯಾವಾಗ ಬೇಕಾದರೂ ನಾನು ನಟನೆಗೆ ಗುಡ್ ಬೈ ಹೇಳಬಹುದು ಶಾಕಿಂಗ್ ಸ್ಟೇಟ್ ಮೆಂಟ್ ನೀಡಿದ ವಿಜಯ್ ದೇವರಕೊಂಡ – ಕಹಳೆ ನ್ಯೂಸ್
ಟಾಲಿವುಡ್ ರೊಮ್ಯಾಂಟಿಕ್ ಸ್ಟಾರ್ ವಿಜಯ್ ದೇವರಕೊಂಡ ಚಂದನವನದಲ್ಲಿ ದೊಡ್ಡ ತಾರಾ ಮೆರಗು ಪಡೆದ ಪ್ರತಿಭಾವಂತ. ಪರಭಾಷೆಗಳಲ್ಲೂ ಹವಾ ಎಬ್ಬಿಸಿದ ಸರದಾರ. ಕೈಯಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಬ್ಯೂಸಿ. ಇದೀಗ ಇವರು ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದು, ಅಭಿಯನದ ನಿವೃತ್ತಿ ಬಗ್ಗೆ ಮಾತುಗಳನ್ನಾಡಿದ್ದಾರೆ.
‘ಹೌದು, ನಾನು ಯಾವಾಗ ಬೇಕಾದರೂ ನಟನೆಯಿಂದ ಹೊರ ಬರಬಹುದು’ ಎನ್ನುವ ಶಾಕಿಂಗ್ ಸ್ಟೇಟ್ ಮೆಂಟ್ ಅನ್ನು ವಿಜಯ್ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕೊಟ್ಟಿದ್ದಾರೆ.
ಇತ್ತೀಚಿಗೆ ‘ಡಿಯರ್ ಕಾಮ್ರೇಡ್’ ಚಿತ್ರದ ಪ್ರಮೋಷನ್ ವೇಳೆ ಎದುರಾದ ಪ್ರಶ್ನೆಗೆ ಕೂಲ್ ಆಗಿಯೇ ಉತ್ತರಿಸಿರುವ ದೇವರಕೊಂಡ, ‘ಯಾವಾಗ ಬೇಕಾದರೂ ನಾನು ನಟನೆಗೆ ಗುಡ್ ಬೈ ಹೇಳಬಹುದು. ಒಂದು ವೇಳೆ ಚಿತ್ರರಂಗದಲ್ಲಿ ನಾನು ಮಾಡಬೇಕಾದ್ದು ಏನೂ ಇಲ್ಲ ಎಂದು ಅನ್ನಿಸಿದರೆ, ಅಂದೇ ನಟನೆ ತ್ಯಜಿಸಬಹುದು. ಅವತ್ತಿಗೆ ನಾನು ಬಣ್ಣ ಹಚ್ಚುವುದನ್ನು ಬಿಟ್ಟು ಬಿಡ್ತೀನಿ’ ಎಂದಿದ್ದಾರೆ.
ಇದೇ ವೇಳೆ, ತಮ್ಮ ಮದುವೆ ಬಗ್ಗೆಯೂ ಮಾತಾಡಿರುವ ಅವರು, ‘5 ವರ್ಷಗಳ ನಂತರ ದಾಂಪತ್ಯ ಜೀವನಕ್ಕೆ ಕಾಲಿಡುತ್ತೇನೆ. ಬಹುಶಃ ನನ್ನ 35 ನೇ ವಯಸ್ಸಿಗೆ ಗೃಹಸ್ಥಾಶ್ರಮಕ್ಕೆ ಹೋಗುತ್ತೇನೆ’ ಎಂದಿದ್ದಾರೆ.