ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮಕ್ಕಳಿಗೆ ಬಸ್ ಇಳಿಯಲು ಬಿಡದೇ ಇರುವ ಖಾಸಗಿ ಬಸ್ ನಿರ್ವಾಹಕನೊಬ್ಬನಿಗೆ 10 ದಿನಗಳ ಕಾಲ ಮಕ್ಕಳ ಮನೆಯಲ್ಲಿ ಕೆಲಸ ಮಾಡುವಂತೆ ಸೂಚಿಸಿ ವಿಭಿನ್ನ ರೀತಿಯ ಶಿಕ್ಷೆ ನೀಡಲಾಗಿದೆ.
ಪರಪ್ಪನಂಗಡಿ ಎಂಬಲ್ಲಿ ಎಲ್ಕೆಜಿ ಕಲಿಯುತ್ತಿದ್ದ ಪುಟಾಣಿಯೊಬ್ಬ ತನ್ನ ಅಕ್ಕನೊಂದಿಗೆ ಬಸ್ಸು ಇಳಿಯುವಾಗ ಗಡಿಬಿಡಿ ಕಂಡೆಕ್ಟರ್ ಬಸ್ಸ್ ಗೆ ರೈಟ್ ಹೇಳಿದ್ದ. ಪುಟ್ಟ ತಮ್ಮ ಇಳಿಯುವ ಮುನ್ನವೇ ಬಸ್ಸ್ ಹೊರಟಿತ್ತು. ತುಂತುರು ಮಳೆಯಲ್ಲಿ ತಮ್ಮನ ಕಾಣದ ಅಕ್ಕ ಕಿರುಚಿಕೊಂಡಾಗ ಬಸ್ಸು ಸುಮಾರು 300ಮೀಟರ್ ದೂರ ಹೋಗಿ ನಿಂತಿತ್ತು.
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಮಾಜಿಕ ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದಿದ್ದರು. ಇದನ್ನು ನೋಡಿದ ಜಿಲ್ಲಾಧಿಕಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರಿಂದ ವರದಿ ಕೋರಿದ್ದರು. ತನಿಖೆ ನಡೆಸಿದ ಆರ್ಟಿಒ, ಬಸ್ ನಿರ್ವಾಹಕ ಸಕೀರ್ ಆಲಿಯ ತಪ್ಪನ್ನು ಗುರುತಿಸಿದೆ. ಆರ್ಟಿಒ ವರದಿ ಆಧರಿಸಿ ಜಿಲ್ಲಾದಿಕಾರಿ ಸಕೀರ್ ಗೆ 10 ದಿನಗಳ ಕಾಲ ಮಕ್ಕಳ ಮನೆಯಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ.