ಮಂಗಳೂರು: ಜಿಲ್ಲಾ ಗೃಹರಕ್ಷಕದಳ ಕಚೇರಿ ಮೇರಿಹಿಲ್‍ನಲ್ಲಿ ಕಾರ್ಗಿಲ್ ದಿನಾಚರಣೆ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಮುಂಬತ್ತಿ ಹಚ್ಚಿ ಪುಷ್ಪ ನಮನ ಸಲ್ಲಿಸಲಾಯಿತು.
ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠರಾದ ಡಾ. ಮುರಲೀ ಮೋಹನ್ ಚೂಂತಾರು ಮಾತನಾಡಿ ಕಾರ್ಗಿಲ್ ಯುದ್ಧ 1999ರ ಮೇಯಿಂದ ಜುಲೈ ತನಕ ನಡೆದು ಈ ದಿನದಂದು ವಿಜಯೋತ್ಸವ ನಡೆಯಿತು. ಈ ಯುದ್ಧದಲ್ಲಿ 527 ವೀರ ಯೋಧರು ಹುತಾತ್ಮರಾಗಿದ್ದರು. ಅದರಲ್ಲಿ 3 ವೀರ ಯೋಧರಿಗೆ ಪರಮವೀರ ಚಕ್ರ ಮರಣೋತ್ತರ ಪ್ರಶಸ್ತಿ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸಮಾದೇಷ್ಠರಾದ ರಮೇಶ್, ಕಚೇರಿ ಅಧೀಕ್ಷಕ ರತ್ನಾಕರ, ಪ್ರಥಮ ದರ್ಜೆ ಸಹಾಯಕಿ ಅನೀತಾ ಟಿ.ಎಸ್., ದಲಾಯತ್ ಮೀನಾಕ್ಷಿ, ಹಾಗೂ ಗೃಹರಕ್ಷಕರಾದ ರಮೇಶ್ ಭಂಡಾರಿ, ಸನತ್ ಆಳ್ವಾ, ದಿವಾಕರ್, ಸತೀಶ್ ಆಚಾರ್ಯ, ಬಶೀರ್, ಹಾಗೂ ಸುಖಿತಾ ಶೆಟ್ಟಿರವರು ಉಪಸ್ಥಿತರಿದ್ದರು.