Wednesday, January 22, 2025
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಐಟಿ ಕ್ಲಬ್ ಉದ್ಘಾಟನೆ : ಗಣಕ ವಿಜ್ಞಾನದ ವಿದ್ಯಾರ್ಥಿಗಳನ್ನ ಶ್ಲಾಘಿಸಿದ ಪ್ರೊ. ಸಂದೇಶ್ ಕಾರಂತ್ – ಕಹಳೆ ನ್ಯೂಸ್

ಪುತ್ತೂರು: ಗಣಕ ವಿಜ್ಞಾನದ ಮೂಲ ತತ್ವಗಳನ್ನು ಕಲಿತು ಅವುಗಳನ್ನು ಅಳವಡಿಸುವಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರುತ್ತಿರುವುದು ಶ್ಲಾಘನೀಯ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೇಶ್ ಕಾರಂತ್ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಐಟಿ ಕ್ಲಬ್‍ನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸಂದರ್ಶನ ಎದುರಿಸುವ ಕಲೆ ಎಂಬ ವಿಚಾರವಾಗಿ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ತಮ್ಮ ಪ್ರಥಮ ವರ್ಷದಿಂದಲೇ ಸಂದರ್ಶನದ ತಯಾರಿಗಳನ್ನು ಪ್ರಾರಂಭಿಸಬಹುದು. ತಮಗೆ ತಿಳಿದಿರುವ ವಿಚಾರಗಳನ್ನು ಸ್ವವಿವರ ಪತ್ರದಲ್ಲಿ ದಾಖಲಿಸಿಕೊಳ್ಳಬೇಕು. ಇದರಿಂದ ಮುಂದೆ ಕಲಿಯುವ ವಿಚಾರಗಳತ್ತ ಗಮನ ಹರಿಸಲು ಸಹಾಯಕವಾಗುತ್ತದೆ. ವಿಷಯ ಜ್ಞಾನದೊಂದಿಗೆ ಭಾಷಾ ಪ್ರಾವಿಣ್ಯತೆಯಿದ್ದರೆ ಅಂಥವರು ಯಾವುದೇ ರೀತಿಯ ಮೈಲಿಗಲ್ಲನ್ನೂ ದಾಟಬಲ್ಲರು. ತೊಡುವ ಬಟ್ಟೆ, ನಮ್ಮ ನಡವಳಿಕೆ ಹೇಗಿರಬೇಕು ಎಂಬುದಾಗಿ ತಿಳಿಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂದರ್ಶನದಲ್ಲಿ ಏನೆಲ್ಲಾ ವಿಚಾರಗಳನ್ನು ಮಾತನಾಡಬೇಕು, ಯಾವರೀತಿಯಾಗಿ ವರ್ತಿಸಬೇಕು ಎಂದು ವಿವರಿಸುತ್ತಾ, ತಮ್ಮ ಅನುಭವಗಳನ್ನು ಉದಾಹರಣೆಯೊಂದಿಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿನ ವೇದಿಕೆಯನ್ನು ಮಕ್ಕಳು ಸದುಪಯೋಗ ಪಡಿಸುವುದರೊಂದಿಗೆ, ಮಾನವೀಯ ಮೌಲ್ಯಗಳನ್ನೂ ಅಳವಡಿಸಿಕೊಳ್ಳಬೇಕು. ಕೊನೆಗೆ ಬರುವಂತಹ ಪರಿಣಾಮ ಮಾನವೀಯತೆಯ ದೃಷ್ಟಿಯಿಂದಲೂ ಸಹಕಾರಿಯಾಗಿರಬೇಕು ಎಂದರು.

ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್, ಐಟಿ ಕ್ಲಬ್ ಸಂಚಾಲಕ ಶ್ರೀ ಗುರುಕಿರಣ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಾಣಿ ಪ್ರಾರ್ಥಿಸಿದರು. ಉಪನ್ಯಾಸಕಿ ಸುಚಿತ್ರಾ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ನವ್ಯಶ್ರೀ ಹಾಗೂ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು.