Thursday, January 23, 2025
ಸುದ್ದಿ

ಬಿ ಎಸ್ ಯಡಿಯೂರಪ್ಪ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕಲ್ಲಡ್ಕ ಡಾ ಪ್ರಭಾಕರ್ ಭಟ್ – ಕಹಳೆ ನ್ಯೂಸ್

ಬಂಟ್ವಾಳ : ರಾಜ್ಯದ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಮಾಡಿದ ಬಿ.ಎಸ್.ಯಡಿಯೂರಪ್ಪ ಅವರ ಬೆಂಗಳೂರಿನ ಧವಳಗಿರಿ ನಿವಾಸಕ್ಕೆ ಕಲ್ಲಡ್ಕ ಡಾ! ಪ್ರಭಾಕರ್ ಭಟ್ ತೆರಳಿ ಶುಭಾಶಯ ಕೋರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಧ್ಯಾಹ್ನ 12.50ರ ಇಂಡಿಗೋ ವಿಮಾನದ ಮೂಲಕ ಬೆಂಗಳೂರು ತೆರಳಿದ ಕಲ್ಲಡ್ಕದ ಹಿರಿಯ ಆರ್.ಎಸ್.ಎಸ್.ಪ್ರಮುಖ ಡಾ ಪ್ರಭಾಕರ್ ಭಟ್ ಅವರು ನೇರವಾಗಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿದ್ದಾರೆ. ಪ್ರಸ್ತುತ ದಕ್ಷಿಣ ಮಧ್ಯಕ್ಷೇತ್ರ ಕಾರ್ಯಕಾರಿಣಿ ಸದಸ್ಯ ರಾಗಿರುವ ಡಾ. ಪ್ರಭಾಕರ್ ಭಟ್ ಅವರು ಬಿ.ಎಸ್.ಅವರ ಆತ್ಮೀಯ ಸ್ನೇಹಿತ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ಬೆಳಿಗ್ಗೆ ಸ್ವತಃ ಬಿ.ಎಸ್.ಯಡಿಯೂರಪ್ಪ ಅವರು ಫೋನ್ ಮೂಲಕ ಸಂಪರ್ಕ ಮಾಡಿ, ರಾಜ್ಯದ 4ನೇ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಆ ಸಂತಸದ ಕ್ಷಣದಲ್ಲಿ ಪಾಲು ಪಡೆಯುವಂತೆ ಕೋರಿದ್ದರು.

ಹಾಗಾಗಿ ಡಾ ಪ್ರಭಾಕರ್ ಭಟ್ ಅವರು ಮಧ್ಯಾಹ್ನದ ವೇಳೆ ಬೆಂಗಳೂರು ತಲುಪಿದ್ದು, ಯಡಿಯೂರಪ್ಪ ಅವರ ಮನೆಗೆ ತೆರಳಿದ್ದಾರೆ. ಹಾಗೂ ಸಂಜೆ ನಡೆದ ಪ್ರಮಾಣವಚನ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡಾ. ಪ್ರಭಾಕರ್ ಭಟ್ ಹಾಗೂ ಬಿ.ಎಸ್.ವೈ ಅವರು ಬಾಲ್ಯದ ದಿನದಿಂದಲೂ ಆತ್ಮೀಯ ಸ್ನೇಹಿತರಾಗಿದ್ದರು. ಸುಮಾರು 50 ವರ್ಷಗಳಿಂತಲೂ ಅಧಿಕವಾಗಿ ಇವರು ಸಂಘದ ಮೂಲಕ ಸ್ನೇಹ ಸಂಬಂಧ ಹೊಂದಿದ್ದಾರೆ.

ಬಿ.ಎಸ್.ವೈ ಅವರು ಆರಂಭದಲ್ಲಿ ಶಿವಮೊಗ್ಗ ತಾಲೂಕು ಕಾರ್ಯವಾಹವಾಗಿದ್ದ ಸಂದರ್ಭದಲ್ಲಿ ಡಾ. ಭಟ್ ಅವರು ಪುತ್ತೂರು ಕಾರ್ಯವಾಹಕವಾಗಿದ್ದರು. ಆ ಬಳಿಕ ಸಂಘದ ಮೂಲಕ ಅನೇಕ ಜವಬ್ದಾರಿಗಳ ಮೂಲಕ ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಮಾಡುತ್ತಾ ಬಂದಿದ್ದಾರೆ.

ಬಿ.ಎಸ್.ವೈ ಅವರು ಈ ಹಿಂದೆ 3 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕಾರುಬಾರು ಮಾಡಿದ್ದರೆ, ಡಾ. ಭಟ್ ಅವರು ಕಲ್ಲಡ್ಕದಿಂದಲೇ ಸರಕಾರದ ಆಗು ಹೋಗುಗಳಲ್ಲಿ ಪಾಲುದಾರರಾಗಿದ್ದರು.

ದೇಶದಲ್ಲಿ ತುರ್ತುಸ್ಥಿತಿ ಉಂಟಾದ ವೇಳೆಯಲ್ಲಿಯೂ ಬಿ.ಎಸ್.ವೈ ಮತ್ತು ಡಾ. ಪ್ರಭಾಕರ್ ಭಟ್ ಅವರು ಜೊತೆಯಾಗಿದ್ದರು. ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ವೇಳೆ ಎರಡು ಬಾರಿ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಎರಡು ಬಾರಿಯೂ ಹೆಲಿಪ್ಯಾಡ್ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಅಂಗಳದಲ್ಲಿ ಲ್ಯಾಂಡ್ ಅಗಿದ್ದು ವಿಶೇಷ.

ಡಾ. ಪ್ರಭಾಕರ್ ಭಟ್ ಅವರ ನೇತೃತ್ವದಲ್ಲಿ ನಡೆದ ರಾಮನಾಮತಾರಕ ಯಜ್ಞ ಕಾರ್ಯಕ್ರಮದಲ್ಲೂ ಬಿ.ಎಸ್.ವೈ ಭಾಗಿಯಾಗಿದ್ದರು. ಇತ್ತೀಚಿಗೆ ಶ್ರೀ ರಾಮ ಭಜನಾ ಮಂದಿರದ ಉದ್ಘಾಟನೆಯ ವೇಳೆಯೂ ಆಗಮಸಿ ಕಾರ್ಯಕ್ರಮ ಉದ್ದೇಶಸಿ ಮಾತನಾಡಿದ್ದಾರೆ.

ಡಾ. ಪ್ರಭಾಕರ್ ಭಟ್ ಅವರು ಕರೆದ ಬಹುತೇಕ ಎಲ್ಲಾ ಪ್ರಮುಖ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇವರ ಸ್ನೇಹಕ್ಕೆ ಬಿ.ಎಸ್.ವೈ. ಬೆಲೆ ನೀಡಿದ್ದಾರೆ. ಅವರು ಇಂದು 4 ನೇ ಬಾರಿ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವುದು ಸಂತಸ ತಂದಿದೆ ಎಂದು ಡಾ. ಭಟ್ ತಿಳಿಸಿದ್ದಾರೆ. ಹಾಗೂ ಅವರಿಗೆ ತುಂಬು ಹೃದಯದ ಅಭಿನಂದನೆಯನ್ನು ಹೇಳಿದ್ದಾರೆ.