Saturday, February 1, 2025
ಸುದ್ದಿ

ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಹಲವು ಮನೆಗಳಿಗೆ ಹಾನಿ – ಕಹಳೆ ನ್ಯೂಸ್

ಬಂಟ್ವಾಳ: ಕಳೆದ ಹಲವು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಗುಡ್ಡ, ಆವರಣ ಗೋಡೆ ಕುಸಿತ ಹಾಗೂ ಮನೆಗಳಿಗೆ ಹಾನಿ, ಅವಘಡಗಳು ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರೀ ಮಳೆಗೆ ಮಂಚಿ ಗ್ರಾಮದ ಪತ್ತುಮುಡಿ ಎಂಬಲ್ಲಿ ಮುಹಮ್ಮದ್ ಇಝಾತ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಬಿದ್ದು ಸುಮಾರು 20 ಸಾವಿರ ರೂ. ನಷ್ಟ ಸಂಭವಿಸಿದೆ. ವಿಟ್ಲ ಕಸಬ ಗ್ರಾಮದ ಪುರುಷೋತ್ತಮ ಆಚಾರಿ ಎಂಬವರ ಕಚ್ಛಾ ಮನೆ ತೀವ್ರ ಹಾನಿಗೊಳಪಟ್ಟಿದೆ. ದೇವಸ್ಯ ಪಡೂರು ಗ್ರಾಮದ ಶಾಂತಿಪ್ರಸಾದ್ ಎಂಬವರ ಮನೆಗೆ ಹಾನಿಯಾಗಿದೆ. ಹಾಗೂ ಇದೇ ಗ್ರಾಮದ ಸತ್ಯ ವಿಜಯ್‍ರಾವ್ ಎಂಬವರಿಗೆ ಸೇರಿದ ಶೆಡ್ ಹಾಗೂ ಕೊಠಡಿ ಸಂಪೂರ್ಣ ಕುಸಿದಿದ್ದು, ದ್ವಿಚಕ್ರ ವಾಹನಕ್ಕೆ ಹಾನಿಯಾಗಿರುವ ಬಗ್ಗೆ ಬಂಟ್ವಾಳ ತಾಲೂಕು ಕಚೇರಿಯಲ್ಲಿ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು