ಎಲೆಕ್ಟ್ರಿಕ್ ಚಾಲಿತ ವಾಹನ ಬಳಕೆಗೆ ಉತ್ತೇಜನ ಹಿನ್ನೆಲೆ; ವಾಹನಗಳ ನೊಂದಣಿ ಶುಲ್ಕದಲ್ಲಿ ಭಾರಿ ಹೆಚ್ಚಳ – ಕಹಳೆ ನ್ಯೂಸ್
ನವದೆಹಲಿ: ಕೇಂದ್ರ ಸರ್ಕಾರವು ಹೊಸ ವಾಹನ ಖರೀದಿ ಮಾಡುವವರಿಗೆ ಶಾಕಿಂಗ್ ನ್ಯೂಸ್ ನೀಡಿದ್ದು, ಹೊಸ ವಾಹನಗಳ ನೋಂದಣಿ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲು ಮುಂದಾಗಿದೆ.
ಪೆಟ್ರೋಲ್, ಡೀಸೆಲ್ ಬಳಕೆಗೆ ಕಡಿವಾಣ ಹಾಕಿ ಎಲೆಕ್ಟ್ರಿಕ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಈ ತಂತ್ರ ರೂಪಿಸಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಪ್ರಸ್ತಾವಿತ ನೋಂದಣಿ ಶುಲ್ಕ ಹೆಚ್ಚಳದಿಂದ ವಿನಾಯತಿ ನೀಡಲಾಗಿದೆ.
ಹೊಸ ಕಾರುಗಳ ನೋಂದಣಿ ಶುಲ್ಕವನ್ನು 600 ರೂ. ರಿಂದ 5 ಸಾವಿರ ರೂ.ಗೆ ಹೆಚ್ಚಳ ಮಾಡುವ ನಿರೀಕ್ಷೆ ಇದೆ. ಹಳೆ ಕಾರುಗಳ ನೋಂದಣಿ ಮರು ಪರಿಷ್ಕರಣೆಗೆ 600 ರೂ. ರಿಂದ 10 ಸಾವಿರ ರೂ. ವರೆಗೆ ಹೆಚ್ಚಳ. ಹೊಸ ದ್ವಿಚಕ್ರ ವಾಹನಗಳ ನೋಂದಣಿ ಶುಲ್ಕ 60 ರೂ. ನಿಂದ 1 ಸಾವಿರ ರೂ. ಗೆ ಏರಿಕೆ ಮತ್ತು ದ್ವಿಚಕ್ರ ವಾಹನಗಳ ನೋಂದಣಿ ಮರು ಪರಿಷ್ಕರಣೆ 50 ರೂ. ನಿಂದ 2 ಸಾವಿರ ರೂ. ಗೆ ಏರಿಕೆ ಆಗುವ ಸಾಧ್ಯತೆ ಇದೆ.
ಇನ್ನು ಹೊಸ ಕ್ಯಾಬ್‍ಗಳ ನೋಂದಣಿ ಶುಲ್ಕ 1 ಸಾವಿರ ರೂ. ನಿಂದ 10 ಸಾವಿರ ರೂ. ಮತ್ತು ಹಳೆ ಕ್ಯಾಬ್‍ಗಳ ನೋಂದಣಿ ಮರು ಪರಿಷ್ಕರಣೆಗೆ 1 ಸಾವಿರ ರೂ. ನಿಂದ 20 ಸಾವಿರ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ.