ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನಡುವಿನ ಭೇಟಿಯ ಕೆಲ ದಿನಗಳ ನಂತರ ಪಾಕಿಸ್ತಾನದೊಂದಿಗೆ 125 ಮಿಲಿಯನ್ ಡಾಲರ್ ಮೌಲ್ಯದ ಮಿಲಿಟರಿ ವ್ಯಾಪಾರವನ್ನು ಅನುಮೋದಿಸುವ ನಿರ್ಧಾರವನ್ನು ಪೆಂಟಗಾನ್ ಅಮೆರಿಕಾ, ಕಾಂಗ್ರೆಸ್ಸಿಗೆ ಸೂಚಿಸಿದೆ. ಇದರಿಂದಾಗಿ ಪಾಕಿಸ್ತಾನದ ಎಫ್-16 ಯುದ್ಧವಿಮಾನಗಳ ಅಂತಿಮ ಬಳಕೆಯ ಮೇಲ್ವಿಚಾರಣೆಯನ್ನು ಅಮೆರಿಕಾ ಸಂಪೂರ್ಣವಾಗಿ ವಹಿಸಿಕೊಳ್ಳಲಿದೆ.
ಟ್ರಂಪ್‍ನಿರ್ದೇಶನದ ಮೇರೆಗೆ 2018ರ ಜನವರಿಯಿಂದ ಪಾಕಿಸ್ತಾನಕ್ಕೆ ಭದ್ರತಾ ಸಹಾಯವನ್ನು ಸ್ಥಗಿತಗೊಳಿಸಿದ್ದು ಆ ನಿಯಮ ಇನ್ನೂ ಜಾರಿಯಲ್ಲಿದೆ. ಆದರೆ ಇತ್ತೀಚಿನ ಈ ನಿರ್ಧಾರ ಪಾಕ್‍ನಲ್ಲಿರುವ ಎಫ್-16 ಯುದ್ಧವಿಮಾನಗಳ 24*7 ಬಳಕೆಯ ಮೇಲ್ವಿಚಾರಣೆಗೆ ಸಹಕಾರಿಯಾಗಲಿದೆ ಎಂದು ಯುಎಸ್ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.
“2018ರ ಜನವರಿಯಲ್ಲಿ ಅಧ್ಯಕ್ಷರು ಘೋಷಿಸಿದ ಭದ್ರತಾ ನೆರವು ನಿಬರ್ಂಧದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಅವರು ಪುನರುಚ್ಚರಿಸಿದಂತೆ, ನಮ್ಮ ಸಂಬಂಧದ ವಿಶಾಲ ವ್ಯಾಪ್ತಿಗೆ ಅನುಗುಣವಾಗಿ ಕೆಲವು ಭದ್ರತಾ ನೆರವು ಕಾರ್ಯಕ್ರಮಗಳ ಪುನಃಸ್ಥಾಪನೆಯನ್ನು ನಾವು ಪರಿಗಣಿಸಬಹುದು” ಎಂದು ಅಲ್ಲಿನ ರಾಜ್ಯ ಇಲಾಖೆಯ ವಕ್ತಾರರು ಹೇಳಿದರು.
“125 ಮಿಲಿಯನ್ ಯುಎಸ್ ಡಾಲರ್ ವೆಚ್ಚದ ಎಫ್-16 ವಿಮಾನ ಬಳಕೆಯ ಬಗೆಗೆ ನಿರಂತರವಾಗಿ ಬೆಂಬಲ ಹಾಗೂ ತಾಂತ್ರಿಕ ಭದ್ರತಾ ತಂಡದ ನೆರವನ್ನು ಪಾಕಿಸ್ತಾನಕ್ಕೆ ನೀಡಲು ರಾಜ್ಯ ಇಲಾಖೆ ನಿರ್ಧರಿಸಿದೆ” ಎಂದು ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ತಿಳಿಸಿದೆ. ಹೇಳಿಕೆಯ ಪ್ರಕಾರ, ಪಾಕಿಸ್ತಾನ ಮತ್ತು ಅಮೇರಿಕಾ ಈ ಹಿಂದೆ ನೀಡುತ್ತಿದ್ದ ತಾಂತ್ರಿಕ ಬೆಂಬಲ ಸೇವೆಗಳನ್ನು ಮುಂದುವರಿಸಬೇಕೆಂದು ವಿನಂತಿಸಿದೆ. ಅಮೆರಿಕಾ ಸರ್ಕಾರ ಮತ್ತು ಗುತ್ತಿಗೆದಾರ ತಾಂತ್ರಿಕ ಮತ್ತು ಲಾಜಿಸ್ಟಿಕ್ಸ್ ಬೆಂಬಲ ಸೇವಾ ಸಂಸ್ಥೆಗಳು ಮತ್ತು ಪಾಕಿಸ್ತಾನ ಪೀಸ್ ಡ್ರೈವ್ ಸುಧಾರಿತ ಯುದ್ಧ ವಿಮಾನಗಳ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಲು ತೀರ್ಮಾನಿಸಿದೆ.