ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯದ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಚೆನ್ನಕೇಶವ ದೇವಳದ ಸಭಾಂಗಣದಲ್ಲಿ ನಡೆಯಿತು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಆಚರಿಸಲಾಯಿತು. ನಂತರ ಸಾಮಾಜಿಕ ಕಾರ್ಯಕರ್ತ ರಾಜೇಶ್ ರೈ ಮೇನಾಲರವರು ಮಾತನಾಡಿ ತ್ಯಾಗ ಬಲಿದಾನಕ್ಕೆ ಪರ್ಯಾಯ ಹೆಸರೇ ಭಾರತೀಯ ಸೈನಿಕರು, ಇವರ ತ್ಯಾಗದಿಂದ ಇಂದು ಈ ದೇಶ ನೆಮ್ಮದಿಯಾಗಿದೆ ಎಂದು ಕಾರ್ಗಿಲ್ ವಿಜಯದ ಯಶೋಗಾಥೆಯನ್ನು ವಿವರಿಸಿದರು.
ಡಿವಿನ್ ನಿಡ್ಯಮಲೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪರಿಷತ್‍ನ ನಗರ ಸಹಕಾರ್ಯದರ್ಶಿ ರಕ್ಷಿತ್ ಶೀರಡ್ಕ, ಹಾಗೂ ವಿದ್ಯಾರ್ಥಿ ಪರಿಷತ್‍ನ ಕಾರ್ಯಕರ್ತರು ಉಪಸ್ಥಿತರಿದ್ದರು.