Thursday, November 28, 2024
ಸುದ್ದಿ

ಪ್ರತೀ ಊರಿನ ಹೆಸರಿನ ಹಿಂದೆ ಇತಿಹಾಸವಿದೆ: ಕೆ.ಎಸ್. ಈಶ್ವರ್ ಪ್ರಸಾದ್- ಕಹಳೆ ನ್ಯೂಸ್

ಪುತ್ತೂರು: ಪ್ರತಿಯೊಬ್ಬರಿಗೂ ನಮ್ಮ ಊರು ಎಂದರೆ ವಿಶೇಷವಾದ ಒಲವು. ನಾವು ಹುಟ್ಟಿ ಬೆಳೆದ ಊರಿನ ಬಗ್ಗೆ ಮಾತನಾಡಲು ಎಲ್ಲರಿಗೂ ಉತ್ಸಾಹವಿರುತ್ತದೆ. ಆದರೆ ಪ್ರತೀ ಊರಿನ ಹೆಸರಿನ ಹಿಂದೆ ಒಂದು ಇತಿಹಾಸ ಇದೆ. ಆ ಹೆಸರು ಬರಲು ಒಂದು ಘಟನೆ ಅಥವಾ ಸಂಘರ್ಷ ನಡೆದಿರುತ್ತದೆ. ಅದರ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಆಸಕ್ತಿಯನ್ನು ತೋರಬೇಕು ಎಂದು ವಿವೇಕಾನಂದ ಪದವಿ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ. ಎಸ್. ಈಶ್ವರ್ ಪ್ರಸಾದ್ ಹೇಳಿದರು.

ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ “ಮಣಿಕರ್ಣಿಕ ಮಾತುಗಾರರ ವೇದಿಕೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ‘ನೂರು ಊರು ಸುತ್ತಿ ಬಂದರೂ, ನಮ್ಮೂರೇ ನಮಗೆ ಮೇಲು’ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಾರದ ಉತ್ತಮ ಮಾತುಗಾರರಾಗಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಅನಘಾ ಎ. ಬಹುಮಾನ ಪಡೆದರು. ಪ್ರಥಮ ವರ್ಷದ ಪತ್ರಿಕೋದ್ಯಮ ತರಗತಿಯು ಉತ್ತಮ ಮಾತುಗಾರರ ತಂಡವಾಗಿ ಹೊರಹೊಮ್ಮಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳಾದ ಅರುಣ್ ಕುಮಾರ್, ಅನಘಾ, ಹರ್ಷಿತಾ, ರಾಮ್ ಕಿಶನ್, ಧನ್ಯ, ಶ್ವೇತ, ಅಂಶಿ, ನಮೃತಾ, ತನುಶ್ರೀ, ಶಿಲ್ಪಾ, ಸುಕನ್ಯ ಹಾಗೂ ಸಂದೀಪ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ ಹಾಗೂ “ಮಣಿಕರ್ಣಿಕ ಮಾತುಗಾರರ ವೇದಿಕೆ” ಕಾರ್ಯಕ್ರಮದ ಕಾರ್ಯದರ್ಶಿ ತೇಜಶ್ರೀ ಪಿ.ವಿ. ಉಪಸ್ಥಿತರಿದ್ದರು.