ಬೆಳ್ತಂಗಡಿ: ಕೃಷಿ ಇಲಾಖೆ ವತಿಯಿಂದ ಯುವಕರಿಗೆ ಮತ್ತು ಕೃಷಿಕರಿಗೆ ಮೂರು ದಿನಗಳ ಕಾಲ ವಿವಿಧ ಕೃಷಿ ಚಟುವಟಿಕೆಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು. ಬೆಳ್ತಂಗಡಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈ ತರಬೇತಿ ಕಾರ್ಯಕ್ರಮ ನಡೆಯಿತು. ಮೂರು ದಿನಗಳ ಈ ತರಬೇತಿಯಲ್ಲಿ 30ಕ್ಕೂ ಅಧಿಕ ಮಂದಿ ಪ್ರಯೋಜನವನ್ನು ಪಡೆದುಕೊಂಡರು.
ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ಪಾಂಡುರಂಗ ಅಣಬೆ ಕೃಷಿ ಬಗ್ಗೆ ಮಾಹಿತಿ ನೀಡಿದರು. ಜೇನು ಸಾಕಣಿಕೆ ಬಗ್ಗೆ ಖ್ಯಾತ ಜೇನು ಕೃಷಿಕ ಶ್ಯಾಮ್ ಭಟ್, ಸಮಗ್ರ ಕೃಷಿಯ ಬಗ್ಗೆ ಪ್ರಭಾಕರ್ ಮಯ್ಯ ಸುರ್ಯ, ತೋಟಗಾರಿಕಾ ಬೆಳೆಗಳ ನಿರ್ವಹಣೆ ಬಗ್ಗೆ ಸಿಪಿಸಿಆರ್‍ಐ ವಿಟ್ಲದ ಡಾ. ನಾಗರಾಜ್, ಕೃಷಿಯಲ್ಲಿ ಉತ್ಪನ್ನಗಳ ಮೌಲ್ಯ ವರ್ಧನೆಯ ಕುರಿತು ಕೆವಿಕೆ ಮಂಗಳೂರಿನ ವಿಜ್ಞಾನಿ ಡಾ. ರಶ್ಮಿ ಮಾಹಿತಿ ನೀಡಿದರು.
ಈ ತರಬೇತಿಯಲ್ಲಿ ಒಂದು ದಿನದ ಪ್ರವಾಸ ಹಮ್ಮಿಕೊಂಡಿದ್ದು ಮೀನುಗಾರಿಕೆ ಬಗ್ಗೆ ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ತರಬೇತಿ ನೀಡಲಾಯಿತು. ಅಂತೆಯೇ ಪಿಂಗಾರ ಕೃಷಿ ಉತ್ಪನ್ನಗಳ ಮೌಲ್ಯವರ್ಧನಾ ಕೇಂದ್ರ. ಸಿಪಿಸಿಆರ್‍ಐಗೆ ಭೇಟಿ ನೀಡಲಾಯಿತು.
ಈ ತರಬೇತಿ ಕಾರ್ಯಕ್ರಮದಲ್ಲಿ ಶೈಜಲಾ, ರಂಜಿತ್, ಸುಕನ್ಯಾ ಸೇರಿದಂತೆ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.