Recent Posts

Monday, January 27, 2025
ಸುದ್ದಿ

ಆನ್‍ಲೈನ್ ಮೂಲಕ ಮರಳು ಬುಕ್ಕಿಂಗ್ ಸ್ಥಗಿತ : “ಡಿ.ಕೆ. ಸ್ಯಾಂಡ್ ಬಝಾರ್”ನಿಂದ ದೊರೆಯುತ್ತಿಲ್ಲ ಮರಳು – ಕಹಳೆ ನ್ಯೂಸ್

ಬಂಟ್ವಾಳ: ಜಿಲ್ಲೆಯ ಜನರಿಗೆ ಕಡಿಮೆ ದರದಲ್ಲಿ, ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ, ಮನೆ ಬಾಗಿಲಿಗೆ ಮರಳು ತಲುಪಿಸುವ ಕಾರ್ಯಕ್ಕೆ ಇದೀಗ ಬ್ರೇಕ್ ಬಿದ್ದಿದೆ. “ಡಿ.ಕೆ. ಸ್ಯಾಂಡ್ ಬಝಾರ್”ನಿಂದ ಆನ್‍ಲೈನ್ ಮೂಲಕ ಸಾರ್ವಜನಿಕರಿಗೆ ಕಡಿಮೆ ದರಲ್ಲಿ ವಿತರಣೆಯಾಗುತ್ತಿದ್ದ ಮರಳು ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಆನ್‍ಲೈನ್‍ನಲ್ಲಿ ಮರಳು ಬುಕ್ಕಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ಹಾಗೂ ಪ್ರತಿಕೂಲ ಹವಾಮಾನದಿಂದ ಮರಳು ಬುಕ್ಕಿಂಗ್ ಹಾಗೂ ಮರಳು ವಿತರಣಾ ಕಾರ್ಯವನ್ನು ನಿಲ್ಲಿಸಲಾಗಿದೆ. ಪ್ರಸ್ತುತ ಸ್ವೀಕರಿಸಿರುವ ಬುಕ್ಕಿಂಗ್‍ಗಳನ್ನು ಆದ್ಯತೆಯ ಮೇರೆಗೆ ಸರಬರಾಜು ಮಾಡಲಾಗುವುದು. ಅದೇ ರೀತಿ ಮನೆಕಟ್ಟುವವರು ಆಯಾ ಗ್ರಾಮ ಪಂಚಾಯತ್‍ನ ಅನುಮತಿ ಪತ್ರ, ಆರ್‍ಟಿಸಿ, ಅಗತ್ಯ ಬೇಕಾಗಿರುವ ಮರಳಿನ ಅಂದಾಜು ಹಾಗೂ ಮನೆ ಅಥವಾ ಜಾಗದ ಭಾವಚಿತ್ರದೊಂದಿಗೆ ದಾಖಲೆಗಳನ್ನು ಸಲ್ಲಿಸಬೇಕು. ಅದಲ್ಲದೆ, ಸಾಲೆತ್ತೂರು ಗ್ರಾಮದ ಬುಕ್ಕಿಂಗ್ ಅನ್ನು ತಡೆಹಿಡಿಯಲಾಗಿದೆ ಎಂದು ದ.ಕ. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ವೆಬ್‍ಸೈಟ್ ಪ್ರಕಟನೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡ್ರೆಜ್ಜಿಂಗ್ ಸಮಸ್ಯೆ:
ಡ್ರೆಜ್ಜಿಂಗ್ ಯಂತ್ರದ ಮೂಲಕ ಪಂಪ್ ಆದ ಹೂಳನ್ನು ಕಾಂಕ್ರೀಟಿಕೃತ ಹೊಂಡದಲ್ಲಿ ಸಂಗ್ರಹಿಸಿ ಅಲ್ಲಿಂದ ಹಿಟಾಚಿಗಳ ಮೂಲಕ ಲಾರಿಗಳಿಗೆ ತುಂಬಿ ಯಾರ್ಡ್‍ಗೆ ಸಾಗಿಸಲಾಗುತ್ತಿದೆ. ಆದರೆ, ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾದ ಕಾರಣ ಡ್ರೆಜ್ಜಿಂಗ್ ಕಾರ್ಯಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಸಂದರ್ಭದಲ್ಲಿ ಡ್ರೆಜ್ಜಿಂಗ್ ಮಾಡಿದರೂ ಪೈಪ್‍ನಲ್ಲಿ ನೀರು ಮಾತ್ರ ಬರುತ್ತವೆ ಎಂದು ಮರಳು ಸಂಗ್ರಹಗಾರ ಸಿಬ್ಬಂದಿಯೊಬ್ಬರು ಮಾಹಿತಿ ನೀಡುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮರಳಿಗೆ ಹೆಚ್ಚಾದ ಬೇಡಿಕೆ:
ದಿನದಿಂದ ದಿನಕ್ಕೆ ಮರಳಿಗಾಗಿ ಬೇಡಿಕೆ ಹೆಚ್ಚಾಗ ತೊಡಗಿದೆ. ಈ ಮೊದಲು ಆನ್‍ಲೈನ್ ಮೂಲಕ ಕಾಯ್ದಿರಿಸಿದ ಎಲ್ಲರಿಗೂ ಮರಳು ಪೂರೈಕೆ ಮಾಡಲಾಗುತ್ತಿತ್ತು. ಇದರಿಂದ ದಿನಾಲೂ ನೂರಾರು ಟಿಪ್ಪರ್, ಲಾರಿಗಳು ಈ ಪರಿಸರದಲ್ಲಿ ಓಡಾಟ ನಡೆಸುತ್ತಿದ್ದವು. ಮರಳಿನ ಬೇಡಿಕೆ ಹೆಚ್ಚಾದರಿಂದ ಯಾರ್ಡ್‍ನಲ್ಲಿ ಮರಳಿನ ಕೊರತೆ ಉಂಟಾದ ಬಳಿಕ ದಿನಕ್ಕೆ 100 ಬುಕ್ಕಿಂಗ್‍ಗಳಿಗೆ ಮಾತ್ರ ಮರಳು ಪೂರೈಕೆ ಮಾಡಲಾಗುತ್ತಿದ್ದವು. ಇದೀಗ ಮತ್ತಷ್ಟು ಬೇಡಿಕೆ ಹಿನ್ನೆಲೆಯಲ್ಲಿ ದಿನಕ್ಕೆ ಒಂದು ಮೊಬೈಲ್ ನಂಬರಿಗೆ ಒಂದೇ ಲೋಡ್ ಮರಳು ನೀಡುವ ವ್ಯವಸ್ಥೆ ಮಾಡಲಾಗಿದೆ.