Sunday, January 26, 2025
ಸುದ್ದಿ

ಹಾರಾಡಿ ಶಾಲಾ ಸಂಸತ್ತು: ಮಳೆಗಾಲದ ಅಧಿವೇಶನ – ಕಹಳೆ ನ್ಯೂಸ್

ಪುತ್ತೂರು: ಹಾರಾಡಿ ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಪ್ರಥಮ ಮಳೆಗಾಲದ ಅಧಿವೇಶನವು ಶಾಲಾ ಸಭಾಂಗಣದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧಿವೇಶನದಲ್ಲಿ ಶಾಲಾ ಸಂಸತ್ತಿನ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ವಿವಿಧ ಇಲಾಖೆಗಳ ಮೇಲಿನ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ತೀವ್ರ ಚರ್ಚೆಗಳು ನಡೆದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸತ್ತಿನ ಸ್ಪೀಕರ್ ಪವಿತ್ ಯು ರೈ ಇವರ ಸಭಾಧ್ಯಕ್ಷತೆಯಲ್ಲಿ ನಡೆದ ಅಧಿವೇಶನದಲ್ಲಿ ಶಾಲಾನಾಯಕಿ ಅಭಿಲಾಷಾ ದೋಟ ನೇತೃತ್ವದ ಆಡಳಿತ ಪಕ್ಷ ಹಾಗೂ ಭೂಮಿಕಾ ಜಿ ನೇತೃತ್ವದ ವಿರೋಧಪಕ್ಷದ ಸದಸ್ಯರ ನಡುವೆ ನಿಯಮಾನುಸಾರವಾದ ಸದನ ಕಲಾಪಗಳು ನಡೆದವು.

ಸದನ ಸಮಾವೇಶದ ಆರಂಭದಲ್ಲಿ ಇಪ್ಪತ್ತು ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಕೆಚ್ಚೆದೆಯನ್ನು ತೋರಿದ ಭಾರತೀಯ ಸೈನಿಕರಿಗೆ ನುಡಿನಮನ ಸಲ್ಲಿಸಲಾಯಿತು. ತದನಂತರ ಸಭಾಧ್ಯಕ್ಷರು ಸದನದಲ್ಲಿ ಸದಸ್ಯರು ಅನುಸರಿಸಬೇಕಾದ ನಿಯಮಗಳ ಬಗ್ಗೆ ಸ್ಪಷ್ಟಪಡಿಸಿದರು.