Saturday, January 25, 2025
ಸುದ್ದಿ

ಫಿಲೋಮಿನಾದಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕರ ಕಾರ್ಯಗಾರ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ಶಿಕ್ಷಕರಿಗೆ ತಮ್ಮ ಪಠ್ಯದ ಜೊತೆಗೆ ಇತರ ಪಠ್ಯದ ಜ್ಙಾನವೂ ಇರಬೇಕು. ಬೋಧನೆಯು ಒಂದು ಕಲೆ. ಇಲ್ಲಿ ಎಷ್ಟು ಆಳವಾಗಿ ಬೋಧಿಸುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. ಬೋಧನೆಯ ಮೊದಲು ಶಿಕ್ಷಕರು ಸಾಕಷ್ಟು ಪೂರ್ವ ತಯಾರಿಯನ್ನು ಮಾಡುವುದು ಅತಿ ಅವಶ್ಯಕವಾಗಿರುತ್ತದೆ ಎಂದು ಮೂಡಬಿದ್ರಿ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ, ಎಮ್‍ಜಿಎಮ್ ಕಾಲೇಜು ಮತ್ತು ಭುವನೇಂದ್ರ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಹಾಗೂ ‘ವನಶ್ರೀ’ ಇದರ ಪೂರ್ವಾಧ್ಯಕ್ಷ ಡಾ. ಪಿ ವೆಂಕಟ್ರಮಣ ಗೌಡ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಮಂಗಳೂರು ವಿವಿ ಸಸ್ಯಶಾಸ್ತ್ರ ಪ್ರಾಧ್ಯಾಪಕರ ಸಂಘ ‘ವನಶ್ರೀ’ ಇದರ ವತಿಯಿಂದ ನೂತನವಾಗಿ ಜಾರಿಗೊಂಡಿರುವ ಸಿಬಿಸಿಎಸ್ ಪಠ್ಯಕ್ರಮದ ಕುರಿತು ವಿವಿಧ ಪದವಿ ಕಾಲೇಜುಗಳ ಸಸ್ಯಶಾಸ್ತ್ರ ಪ್ರಾಧ್ಯಾಪಕರಿಗೆ ಜುಲೈ 27ರಂದು ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲಿ ಆಯೋಜಿಸಲಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ, ಮಾತನಾಡಿದರು. ವಿಶ್ವದ್ಯಾನಿಲಯವು ವರ್ಷಂಪ್ರತಿ ಬೋಧನಾ ಪಠ್ಯಕ್ರಮದ ಕುರಿತು ವಿವಿಧ ಅಧ್ಯಯನ ನಡೆಸಿ, ಕೆಲವು ರೂಪುರೇಷೆಗಳನ್ನು ಜಾರಿಗೆ ತರುತ್ತಿರುತ್ತದೆ. ಈ ಬದಲಾವಣೆಗಳಿಗೆ ಒಗ್ಗಿಕೊಂಡು ಅದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ನಡೆಸಿಕೊಳ್ಳಬೇಕಾದ ಅನಿವಾರ್ಯತೆ ಎಲ್ಲಾ ಪ್ರಾಧ್ಯಾಪಕ ವರ್ಗದವರಿಗಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೌರವ ಅತಿಥಿಗಳಾಗಿ ಪಾಲ್ಗೊಂಡ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೆಂದ್ರದ ಮುಖ್ಯಸ್ಥ ಹಾಗೂ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಆಯ್ಕೆ ಆಧಾರಿತ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ವಿಷಯಗಳನ್ನು ಆಯ್ದುಕೊಳ್ಳುವಲ್ಲಿ ಸಂಪೂರ್ಣ ಸ್ವಾತಂತ್ರ್ಯವಿದೆ. ಉಪನ್ಯಾಸಕರಾಗಿ ನಾವು ಪ್ರಸ್ತುತ ವಿಷಯದ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಸಿ, ತಯಾರಿ ಮಾಡಿಕೊಂಡು ವಿದ್ಯಾರ್ಥಿಗಳ ಗೊಂದಲ ನಿವಾರಣೆಗೆ ಸಹಕರಿಸಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಯೋಚನೆಗಳು ಬದಲಾಗುತ್ತಿದೆ, ಹಾಗೇ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅಧ್ಯಯನದ ಬಗ್ಗೆ ಆಸಕ್ತಿ ಹೊಂದುತ್ತಿದ್ದಾರೆ ಹಾಗೂ ಉಪನ್ಯಾಸಕರೂ ಬೋಧನೆಯತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಒಬ್ಬ ಉಪನ್ಯಾಸಕನಾಗಿ ದಿನ ನಿತ್ಯ ನಾವೇನು ಮಾಡುತ್ತೇವೆ, ಹೇಳುತ್ತೇವೆ ಎನ್ನುವುದು ಪರಿಗಣಿಸಲ್ಪಡುತ್ತದೆ. ನಾವು ಮಾಡುವ ಕೆಲಸ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ‘ಮಶ್ರೂಮ್ ಕಲ್ಚರ್ ಟೆಕ್ನಿಕ್’ ಕುರಿತು ವಿಶೇಷ ಕಾರ್ಯಕ್ರಮವನ್ನು ಸಂಯೋಜಿಸಲಾಯಿತು. ಉದ್ಯಮಿ ಹಾಗೂ ಕೃಷಿ ತಜ್ಞ ಶಿವಕುಮರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.

ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಶಿಪ್ರಭಾ ಬಿ ಪ್ರಾರ್ಥಿಸಿದರು. ವಿಭಾಗ ಮುಖ್ಯಸ್ಥ ಹಾಗೂ ‘ವನಶ್ರೀ’ ಇದರ ಅಧ್ಯಕ್ಷ ಡಾ. ಪ್ರಸನ್ನ ರೈ ಕೆ ಸ್ವಾಗತಿಸಿದರು. ವನ್ಯಶ್ರೀಯ ಕಾರ್ಯದರ್ಶಿ ಡಾ. ಶೋಭಾ ವಂದಿಸಿ, ಜೊತೆ ಕಾರ್ಯದರ್ಶಿ ಹಾಗೂ ಉಜಿರೆಯ ಶ್ರೀ ಧ.ಮ. ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.