Friday, January 24, 2025
ಸುದ್ದಿ

ಸಾಂಕ್ರಮಿಕ ರೋಗ ತಡೆಗಟ್ಟಲು ಮುನ್ನೆಚ್ಚರಿಕಾ ಕಾರ್ಯಕ್ರಮ – ಕಹಳೆ ನ್ಯೂಸ್

ಮೂಡಬಿದ್ರೆ: ಮೂಡಬಿದ್ರೆಯ ಒಂಟಿಕಟ್ಟೆ ದ.ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಸಾಂಕ್ರಮಿಕ ರೋಗ ಬಾರದಂತೆ ತಡೆಗಟ್ಟಲು ಮುನ್ನೆಚ್ಚರಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕ ಕುಮಾರ್ ಪಿ. ಮಾತನಾಡಿ ಮಲೇರಿಯಾ ಮತ್ತು ಡೆಂಗ್ಯೂ ಹರಡುವ ವಿಧಾನ ಹಾಗೂ ಇದನ್ನು ಹೇಗೆ ತಡೆಗಟ್ಟಲು ಮುಂಜಾಗ್ರತಾ ಕ್ರಮವನ್ನು ಸಾರ್ವಜನಿಕರಿಗೆ ವಿವರಿಸಿದರು

.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರದ ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕ ವಿಜಯ್, ಕ್ಷಯರೋಗದ ಬಗ್ಗೆ ಮಾಹಿತಿಯನ್ನು ನೀಡಿದರು. ಹಾಗೂ ಮೂಡಬಿದ್ರೆ ಪುರಸಭೆಯ ಕೌನ್ಸಿಲರ್ ನಾಗರಾಜ ಪೂಜಾರಿ ಶುಚಿತ್ವ ಹಾಗೂ ಸಾಂಕ್ರಮಿಕ ರೋಗದ ಬಗ್ಗೆ ತಿಳಿಸಿದರು. 

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವಕೇಂದ್ರ ಮಂಗಳೂರು ಇದರಲ್ಲಿ ನೇಮಕಾತಿಗೊಂಡ ಮೂಡಬಿದ್ರೆ ತಾಲೂಕು ಸಂಯೋಜಕಿ ಸುಶ್ಮಿತಾ ಬಿ. ಆರ್. ರವರು ನೆಹರು ಯುವ ಕೇಂದ್ರದ ಕಾರ್ಯವೈಖರಿ ಬಗ್ಗೆ ಮಾತನಾಡಿ ಮತ್ತು ಮಲೇರಿಯಾ, ಡೆಂಗ್ಯೂ ತಡೆಗಟ್ಟುವ ಬಗ್ಗೆ ತಿಳಿಸಿ, ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿದರು.

ಈ ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರ ಮಂಗಳೂರಿನ ವಿಕಾಸ್ ಮತ್ತು ಅಮಿತ್, ಮೂಡಬಿದ್ರೆ ನೇತಾಜಿ ಬ್ರಿಗೇಡ್‍ನ ರಾಹುಲ್ ಕುಲಾಲ್, ಎಸ್.ಡಿ.ಎಮ್.ಸಿ ಸ್ಕೂಲ್ ಕಮಿಟಿ ಅಧ್ಯಕ್ಷ ಕರುಣಾಕರ ಪೂಜಾರಿ ,ಉಪಾಧ್ಯಕ್ಷೆ ಪೂರ್ಣಿಮಾ ಹಾಗೂ ದ.ಕ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಎಲ್ವಿರಾ ಜೆನಿಫರ್ ಪಿಂಟೋ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.