Friday, November 29, 2024
ಸುದ್ದಿ

ಬಂಟ್ವಾಳ ತಾಲೂಕು ಉತ್ಪಾದಕರ ಸಹಕಾರ ಸಂಘದ ಸಮಾಲೋಚನಾ ಸಭೆ : ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ – ಕಹಳೆ ನ್ಯೂಸ್

ಬಂಟ್ವಾಳ : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಸಂಯೋಜನೆಗೊಂಡಿರುವ ಬಂಟ್ವಾಳ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮಾಲೋಚನಾ ಸಭೆಯು ಜುಲೈ 27 ರಂದು ¨ ಬಂಟ್ವಾಳದ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ ಕೆ.ರವಿರಾಜ ಹೆಗ್ಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಮಾತನಾಡಿದ ಇವರು ಪ್ರಸ್ತುತ ದಿನಗಳಲ್ಲಿ ಗುಣಮಟ್ಟದ ಹಾಲಿನ ಉತ್ಪಾದನೆ ಹೈನುಗಾರರು ನೀಡುತ್ತಿರುವ ಸಂದರ್ಭದಲ್ಲಿ, ಹಾಲಿನ ಸಂಗ್ರಹಣೆ ಮಾಡುವುದು ಹೇಗೆ ಎಂಬ ಸವಾಲು ಗಳು ಒಕ್ಕೂಟದ ಮುಂದಿವೆ. ಈ ವಷಾರ್ಂತ್ಯದಲ್ಲಿ 64 ಲಕ್ಷದಷ್ಟು ಹಾಲನ್ನು ಹುಡಿಯಾಗಿ ಮಾರ್ಪಾಡು ಮಾಡುವಷ್ಟು ಮಟ್ಟಕ್ಕೆ ಬೆಳೆದಿವೆ ಎಂದರೆ ಸಂಘ ಸ್ವಾವಲಂಬಿಯಾಗುತ್ತಾ ಮುಂದೆ ಸಾಗುತ್ತಿವೆ ಎಂದು ಹೇಳಲು ಸಂತೋಷ ಅಗುತ್ತಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಾಸಭೆ ಪೂರ್ವಭಾವಿಯಾಗಿ ತಾಲೂಕುಗಳ ಸಂಘದ ಜೊತೆ ಸಮಾಲೋಚನೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಇದು ವೇದಿಕೆಯಾಗಿದೆ, ಸಭೆಯಲ್ಲಿ ಕೇಳಿ ಬಂದ ಕೆಲ ಸಮಸ್ಯೆಯನ್ನು ಪರಿಹರಿಸಲು ಅಧ್ಯಕ್ಷರು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಹ್ಯಾಪ್ ಹಾಗೂ ಕ್ಲೀರ ಸಿರಿ ಎಂಬ ಸಾಪ್ಟವೇರ್ ಮೂಲಕ ಸಮಸ್ಯೆ ಬಗೆಹರಿಸಲು ಒಕ್ಕೂಟ ವ್ಯವಸ್ಥೆ ಮಾಡುವ ಉದ್ದೇಶ ಹೊಂದಿದೆ. ಹಾಲು ಉತ್ಪಾದಕರ ಸಂಘಗಳು ಇದರ ಉಪಯೋಗ ಪಡೆಯಲು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ತಾಂತ್ರಿಕವಾಗಿ ಸಾಕಷ್ಟು ತೊಂದರೆಗಳು ಹಾಲು ಉತ್ಪಾದಕರ ಸಂಘಗಳಲ್ಲಿ ಸಾಕಷ್ಟಿದೆ, ಉಪಕರಣಗಳ ಗುತ್ತಿಗೆವಹಿಸಿದ ಕಂಪೆನಿಯ ಸಹಕಾರ ಸರಿಯಾಗಿ ಸಿಗುತ್ತಿಲ್ಲ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ನಿಗದಿತ ಅವಧಿಗೆ ಸರ್ವೀಸ್ ಸೇವೆ ನೀಡದೆ ತೊಂದರೆ ಅನುಭವಿಸುವ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು.
ಮುಂದಿನ ದಿನಗಳಲ್ಲಿ ಇಂತಹ ಯಾವುದೇ ದೂರುಗಳು ಸಂಘಗಳಿಂದ ಬರದಂತೆ ಕೆಲಸ ಮಾಡಬೇಕು ಎಂದು ಕಂಪನಿಯ ಮಾಲಕರಿಗೆ ಅಧ್ಯಕ್ಷರು ಸೂಚನೆ ನೀಡಿದರು.

ಪಶು ಆಹಾರದ ಗುಣಮಟ್ಟದಲ್ಲಿ ಅನುಮಾನಗಳು ಇವೆ ಹಾಗೂ ಹಾಲು ಉತ್ಪಾದನೆ ಕೂಡಾ ಕಡಿಮೆ ಇವೆ ಎಂಬ ದೂರುಗಳಿವೆ ಅಲ್ಲದೆ ಹೆಚ್ಚಿನ ಹೈನುಗಾರರು ಖಾಸಗಿ ರಾಸು ಆಹಾರವನ್ನು ಉಪಯೋಗ ಮಾಡುತ್ತಿದ್ದಾರೆ ಎಂಬ ದೂರು ಸಭಾಧ್ಯಕ್ಷರಿಗೆ ನೀಡಿದರು. ಪಶುಗಳಿಗೆ ಉಷಾರಿಲ್ಲದ ಸಂದರ್ಭದಲ್ಲಿ ಒಕ್ಕೂಟದ ವೈದ್ಯಾಧಿಕಾರಿಗಳು ಕೈಗೆ ಸಿಗುತ್ತಿಲ್ಲ ಹಾಗಾಗಿ ಮೊಬೈಲ್ ಅಸ್ಪತ್ರೆ ಒಕ್ಕೂಟದಿಂದ ಸ್ಥಾಪನೆ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಹಾಲು ಉತ್ಪಾದನೆ, ಹಾಲಿನ ಗುಣಮಟ್ಟ, ಹೈನುಗಾರರಿಗೆ ಸವಲತ್ತುಗಳನ್ನು ವಿತರಣೆ ಮಾಡಿದರಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದ ಸಂಘಗಳನ್ನು ಗುರುತಿಸಿ ಅಂತಹ ಸಂಘಗಳನ್ನು ಸನ್ಮಾನಿಸಲಾಯಿತು.
ಜೊತೆಗೆ ಉನ್ನತ ಶ್ರೇಣಿಯ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಬಳಿಕ ಒಕ್ಕೂಟದ ಆದ್ಯಕ್ಷರು ಹಾಗೂ ನಿರ್ದೇಶಕ ರುಗಳಿಗೆ ವೇದಿಕೆಯಲ್ಲಿ ಫಲಪುಷ್ಪ ಶಾಲು ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ನಿರ್ದೇಶಕರುಗಳಾದ ಸುಚರಿತ ಶೆಟ್ಟಿ, ಸವಿತಾ ಶೆಟ್ಟಿ, ಸುಭದ್ರಾ ರಾವ್, ವ್ಯವಸ್ಥಾಪಕ ನಿರ್ದೇಶಕ ಡಾ! ಜಿ.ವಿ.ಹೆಗ್ಡೆ, ವ್ಯವಸ್ಥಾಪಕ ಡಾ! ನಿತ್ಯಾನಂದ ಭಕ್ತ ಹಾಗೂ ಒಕ್ಕೂಟದ ಅಧಿಕಾರಿಗಳು ಹಾಜರಿದ್ದರು. ನಿರ್ದೇಶಕ ಸುಧಾಕರ ರೈ ಕಾರ್ಯಕ್ರಮವನ್ನ ಸ್ವಾಗತಿಸಿ, ನಿರ್ದೇಶಕಿ ಸವಿತಾ ಶೆಟ್ಟಿ ವಂದಿಸಿದರು. ದಕ್ಷಿಣ ಕನ್ನಡ ಸಹಕಾರಿ ಉತ್ಪಾದಕರ ಒಕ್ಕೂಟ ವಿಸ್ತರಣಾಧಿಕಾರಿ ಎ ಜಗದೀಶ್ ಅವರು ಕಾರ್ಯಕ್ರಮವನ್ನ ನಿರೂಪಿಸಿದರು.