ಆಘಾತಕಾರಿ ಘಟನೆಯೊಂದು ಉಡುಪಿಯಲ್ಲಿ ಕೇಳಿ ಬಂದಿದೆ. ಉಡುಪಿ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಸರಬರಾಜಾದ ನೀರಿನ ಕ್ಯಾನ್‍ಗಳಲ್ಲಿ ಶೇಕಡಾ 53.43 ರಷ್ಟು ಆಲ್ಕೋಹಾಲ್ ಇರುವುದು ಪತ್ತೆಯಾಗಿದೆ. ಕರ್ನಾಟಕ ಸರ್ಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಸರಬರಾಜಾದ ನೀರಿನ ಕ್ಯಾನ್‍ಗಳಲ್ಲಿ ಆಲ್ಕೋಹಾಲ್ ಅಂಶವಿರುವುದು ಪತ್ತೆಯಾಗಿದೆ.
ಆಸ್ಪತ್ರೆಯ ವ್ಯವಸ್ಥಾಪಕ ಶಾಂತ್ ಮಲ್ಯ ಅವರ ಪ್ರಕಾರ, ಆರು ಕ್ಯಾನ್‍ಗಳಷ್ಟು ನೀರನ್ನು ಆಸ್ಪತ್ರೆಗೆ ತರಲಾಗಿದೆ. ಆದರೆ ಅದರಲ್ಲಿ ಮೂರು ಕ್ಯಾನ್‍ಗಳ ಮೇಲೆ ನಿಖರ ಲೇಬಲ್ ಇಲ್ಲದ ಕಾರಣ ಅವುಗಳನ್ನು ಹಿಂದಕ್ಕೆ ಕಳಿಸಲಾಗಿದೆ. ಹಾಗೆಯೇ ಇನ್ನೂ ಮೂರು ಕ್ಯಾನ್ ನೀರನ್ನು ಆಸ್ಪತ್ರೆಯ ಆಡಳಿತವಿರುವ ಅಂಗಡಿಯ ಕಾರ್ಯನಿರ್ವಾಹಕ ಗೋಕುಲ್ ಪಡೆದುಕೊಂಡಿದ್ದಾರೆ.
3 ನೀರಿನ ಕ್ಯಾನ್‍ಗಳಲ್ಲಿ ಎರಡರಲ್ಲಿ 2019ರ ಹಾಗೂ ಒಂದರಲ್ಲಿ 2017ರ ಮೊಹರು ಹಾಕಲಾಗಿದೆ. ಜೂನ್ 4 ರಂದು, ಸಮಾಲೋಚನಾ ಕೊಠಡಿಯಲ್ಲಿದ್ದ ನೀರಿನ ಶೋಧಕಕ್ಕೆ ಕ್ಯಾನ್‍ನ ನೀರನ್ನು ತುಂಬಲಾಗುತ್ತಿದೆ. ಆ ವೇಳೆ ಓರ್ವ ಮೇಲ್ ನರ್ಸ್ ಹಾಗೂ ಮೇಲ್ವಿಚಾರಕನಾಗಿರುವ ವ್ಯಕ್ತಿ ಕೋಣೆಯೊಳಗೆ ಆಗಮಿಸಿದ ವೇಳೆ ವಿಶೇಷವಾಗಿ ಮದ್ಯದ ವಾಸನೆಯನ್ನು ಪತ್ತೆ ಮಾಡಿದ್ದಾನೆ. ಆಗ ಅವರು ನೀರಿನ ಶೋಧಕವನ್ನು ಪರಿಶೀಲಿಸಿದ್ದಾರೆ. ಆದರೆ ಆ ಶೋಧಕದಲ್ಲಿ ಅಂತಹಾ ದೋಷಗಳೇನೂ ಇರಲಿಲ್ಲ. ಬಳಿಕ ನೀರನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಆಗ ನೀರಿನಲ್ಲಿ 53.43 ರಷ್ಟು ಮದ್ಯದ ಅಂಶವಿದೆ ಎಂದು ಪತ್ತೆಯಾಗಿದೆ.
ಘಟನೆ ಕುರಿತಂತೆ ಐಪಿಸಿಯ ಸೆಕ್ಷನ್ 274 ರ ಅಡಿಯಲ್ಲಿ ಉಡುಪಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.