Saturday, November 30, 2024
ಸುದ್ದಿ

ಶ್ರೀರಾಮ ಪ್ರೌಢಶಾಲೆಯಲ್ಲಿ ಪ್ರಾಂತ ಮಟ್ಟದ ಚೆಸ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾಟ – ಕಹಳೆ ನ್ಯೂಸ್

ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್, ವಿದ್ಯಾಭಾರತಿ ಕರ್ನಾಟಕ ಪ್ರಾಂತ ಮಟ್ಟದ ಚೆಸ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮ ಶ್ರೀರಾಮ ಪ್ರೌಢಶಾಲಾ ಮಧುಕರ ಸಭಾಂಗಣದಲ್ಲಿ ರಂದು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆತ್ತವರ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಗುರುಗಳ ಆರ್ಶೀವಾದ, ಪ್ರೇರಣೆಯಿಂದ ಬಾಲ್ಯದಲ್ಲಿ ರಾಜ್ಯ ಮಟ್ಟದ ಕ್ರೀಡೆಯಲ್ಲಿ ಚಾಂಪಿಯನ್ ಶಿಪ್ ಪಡೆಯಲು ಹಾಗೂ ಪ್ರಸ್ತುತ ವೈದ್ಯ ವೃತ್ತಿಯನ್ನು ಮುಂದುವರೆಸಲು ಸಾಧ್ಯವಾಯಿತು.ಕ್ರೀಡೆ ಶಾರೀರಿಕ ದೃಢತೆ, ಮನೋಲ್ಲಾಸ ನೀಡುವುದರೊಂದಿಗೆ, ಮನುಷ್ಯನ ಎಲ್ಲಾ ರೋಗಗಳ ವಿಮುಕ್ತಿಗೆ ಉತ್ತಮ ಮಾರ್ಗೋಪಾಯ ನೀಡಿ ಜೀವನವನ್ನು ಸುಂದರವಾಗಿಸುತ್ತದೆ. “ಕ್ರೀಡೆಯಲ್ಲಿ ಒಳಾಂಗಣ ಕ್ರೀಡೆ ಗ್ರಹಣ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿದರೆ, ಹೊರಾಂಗಣ ಕ್ರೀಡೆ ಸ್ನಾಯುಶಕ್ತಿ ಹಾಗೂ ದೈಹಿಕ ದೃಢsತೆಯನ್ನು ನೀಡುತ್ತದೆ ಎಂದು ಶ್ರೀರಾಮ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿಯಾದ ಕಾಸರಗೋಡು ಜಿಲ್ಲೆ ನೆಲ್ಲಿಕಟ್ಟೆಯ ಆರ್ಯುವೇದ ವೈದ್ಯರಾದ ವಾಣಿಯವರು ಪ್ರಾಂತ ಮಟ್ಟದ ಚೆಸ್ಸ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾಟವನ್ನು ಉದ್ಘಾಟಿಸಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೋರ್ವ ಹಿರಿಯ ವಿದ್ಯಾರ್ಥಿಯಾದ ಪೆರಾಜೆ ಗ್ರಾಮ ಪಂಚಾಯತ್ತಿನ ಪಿ.ಡಿ.ಒ ಶಂಭು ಕುಮಾರ್ ಶರ್ಮರವರು ಮಾತನಾಡಿ “ಶಾಲೆ ಎಂದರೆ ಕೇವಲ ಶಿಕ್ಷಣ ನೀಡುವುದು ಮಾತ್ರವಲ್ಲ ಶಿಕ್ಷಣದ ಜೊತೆಗೆ ಭಾರತೀಯತೆಯನ್ನು ನೀಡಿದರೆ ಮಾತ್ರ ಸ್ವಾಸ್ತ್ಯ ಸಮಾಜದ ನಿರ್ಮಾಣ ಆಗಲು ಸಾಧ್ಯ.ಜೀವನ ನಿಭಾಯಿಸಲು, ಸಾಧನೆಯ ಮೆಟ್ಟಿಲೇರಲು ಮಾತೃಭಾಷೆಯಿಂದ ಸಾಧ್ಯ ಹೊರತು ಆಂಗ್ಲಮಾಧ್ಯಮದ ವ್ಯಾಮೋಹದಿಂದಲ್ಲ” ಎಂದು ಅನುಭವದ ನುಡಿ ಆಡಿದರು.

ಕ್ರೀಡೆಯಿಂದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಪ್ರಪಂಚದಾದ್ಯಂತ ಭಾರತ ದೇಶದ ಕೀರ್ತಿಯನ್ನು ಪಸರಿಸಬೇಕೆಂದು ಶ್ರೀರಾಮ ವಿದ್ಯಾಕೇಂದ್ರದ ಸಹ ಸಂಚಾಲಕರಾದ ರಮೇಶ್ ಎನ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕ್ರೀಡಾಪಟುಗಳಿಗೆ ಶುಭನುಡಿದರು.

ವಿದ್ಯಾಭಾರತೀಯ ಪ್ರಾಂತೀಯ ಶಾರೀರಿಕ ಪ್ರಮುಖರಾದ ಆನಂದ ಶೆಟ್ಟಿಯವರು ಕ್ರೀಡಾಪಟುಗಳಿಗೆ ಹಾರೈಸಿದರು. ಕಾರ್ಯಕ್ರಮದಲ್ಲಿ ನೆಲ್ಲಿಕಟ್ಟೆಯ ಆಯುರ್ವೆದ ವೈದ್ಯರಾದ ವೆಂಕಟ ಗಿರೀಶ್,ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಶ್ರೀರಾಮ ಪ್ರೌಢಶಾಲಾ ಮುಖ್ಯಶಿಕ್ಷಕಿ ವಸಂತಿಕುಮಾರಿ, ಶ್ರೀರಾಮ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ರವಿರಾಜ್ ಕಣಂತೂರು, ಕ್ರೀಡಾವ್ಯವಸ್ಥಾಪಕರು ,ತರಬೇತುದಾರರು, ತೀರ್ಪುಗಾರರು, ಕ್ರೀಡಾಪಟುಗಳು, ಶ್ರೀರಾಮಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಿನ್ನಪ್ಪ ಏಳ್ತಿಮಾರ್ ನಿರೂಪಿಸಿ, ಮನೋಜ್ ಸ್ವಾಗತಿಸಿ ಪ್ರಶಾಂತ್ ವಂದಿಸಿದರು