Thursday, January 23, 2025
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಮಾನ್ಸೂನ್ ಚೆಸ್ ಪಂದ್ಯಾವಳಿಗೆ ತೆರೆ; ಸದೃಢ ಮನಸ್ಸಿನಿಂದ ಮಾತ್ರ ಚೆಸ್‍ನಲ್ಲಿ ಯಶಸ್ಸು ಸಾಧ್ಯ : ಡೆರಿಕ್ ಪಿಂಟೋ – ಕಹಳೆ ನ್ಯೂಸ್

ಪುತ್ತೂರು: ಹೊರಾಂಗಣ ಆಟದಿಂದ ದೈಹಿಕ ಸವಾಲು ಹೆಚ್ಚು. ಚೆಸ್ ಆಟ ಒಳಾಂಗಣ ಆಟವಾಗಿದೆ. ಇಲ್ಲಿ ದೈಹಿಕ ಶ್ರಮ ಅಗತ್ಯವಿಲ್ಲ. ಆದರೆ ಮನಸ್ಸಿಗೆ ಗಾಯವಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂಧರ್ಭದಲ್ಲಿ ಆಟದಿಂದ ಹಿಂಜರಿಯಬಾರದು. ಸಧೃಡವಾದ ಮನಸ್ಸಿನಿಂದ ಚೆಸ್ ಆಟದಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದು ಡೇರಿಕ್ ಚೆಸ್ ಸ್ಕೂಲ್ ಮಂಗಳೂರಿನ ನಿರ್ದೇಶಕ ಡೆರಿಕ್ ಪಿಂಟೋ ಹೇಳಿದರು.

ಅವರು ವಿವೇಕಾನಂದ ಪದವಿ ಕಾಲೇಜಿನಲ್ಲಿ ನಡೆದ ಮಾನ್ಸೂನ್ ಚೆಸ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶನಿವಾರ ಮಾತನಾಡಿ, ಕಳೆದ ನಲುವತ್ತು ವರ್ಷಗಳಿಂದ ಮಾನ್ಸೂನ್ ಚೆಸ್ ಪಂದ್ಯಾಟ ನಡೆದುಕೊಂಡು ಬರುತ್ತಿದೆ. ಈ ಪಂದ್ಯಾಟದಿಂದ ಹಲವು ಪ್ರತಿಭೆಗಳು ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಮಿಂಚುವಂತಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಪದವಿ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಂಕರನಾರಾಯಣ ಭಟ್ ಮಾತನಾಡಿ, ನಮ್ಮ ಬದ್ದಿಯನ್ನು ಚುರುಕುಗೊಳಿಸಲು ಚೆಸ್ ಆಟವು ಹೆಚ್ಚು ಸಹಕಾರಿ. ಚೆಸ್ ಆಟದಿಂದ ನಮ್ಮ ಏಕಾಗ್ರತೆಯ ಮಟ್ಟವನ್ನು ಹೆಚ್ಚಿಸಬಹುದು. ತರಗತಿಯಲ್ಲಿ ಮಾಡುವ ಗಣಿತದ ಪಾಠಕ್ಕೂ ಚೆಸ್ ಆಟಕ್ಕೂ ಸಂಬಂಧವಿದೆ. ನಮ್ಮ ಬುದ್ಧಿಶಕ್ತಿಯಿಂದ ಗಣಿತದ ಲೆಕ್ಕಗಳನ್ನು ಬಗೆಹರಿಸುತ್ತೇವೆ. ಹಾಗೆಯೇ ಚೆಸ್ ಆಟದಲ್ಲಿ ಎದುರಾಗುವ ಸವಾಲುಗಳನ್ನು ಬಗೆಹರಿಸುತ್ತಾ ಯಶಸ್ವಿಯಾಗಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಡೆರಿಕ್ ಚೆಸ್ ಸ್ಕೂಲ್ ಮಂಗಳೂರಿನ ದೀಕ್ಷಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಅಜಿತ್ ಸ್ವಾಗತಿಸಿದರು. ವಿದ್ಯಾರ್ಥಿ ನೌಷದ್ ಉಮರ್ ವಂದಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್.ಕೆ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ರಾವ್ ತೀರ್ಪುಗಾರರಾಗಿ ಸಹಕರಿಸಿದರು.
ಬಹುಮಾನ ವಿತರಣೆ
ಮಾನ್ಸೂನ್ ಚೆಸ್ ಪಂದ್ಯಾಟದ ಬಹುಮಾನ ವಿತರಣೆ ನಡೆಸಲಾಯಿತು. ಸತತ ಮೂರನೇ ಬಾರಿಗೆ ಉಜಿರೆಯ ಎಸ್‍ಡಿಎಮ್ ಕಾಲೇಜಿನ ಶಬ್ದಿಕ್ ವರ್ಮಾ ಚಾಂಪಿಯನ್ ಬಹುಮಾನ ಪಡೆದುಕೊಂಡರು. ಮುಕ್ಕದ ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜಿನ ಹರ್ಮನ್ ಡಯಾನ್ ಸಾಲ್ದನ್ಹಾ ದ್ವಿತೀಯ, ವಿವೇಕಾನಂದ ಪದವಿ ಕಾಲೇಜಿನ ಶ್ರೀರಾಮ ತೃತೀಯ ಬಹುಮಾನ ಪಡೆದುಕೊಂಡರು. ಎಸ್‍ಎಮ್‍ಎಸ್ ಬ್ರಹ್ಮಾವರ ಕಾಲೇಜಿನ ನಾಗೇಶ್ ಪುರಾಣಿಕ್ ನಾಲ್ಕನೇ ಬಹುಮಾನ ಪಡೆದರೆ, ಎನ್‍ಐಟಿಕೆಯ ಶ್ರೀಹರಿ ಶ್ರೀಕುಮಾರ್ ಐದನೇ ಬಹುಮಾನ ಪಡೆದುಕೊಂಡರು. ಪಿಪಿಸಿ ಉಡುಪಿ ಕಾಲೇಜಿನ ವಿರಾಜ್ ಶೆಟ್ಟಿ ಆರನೇ ಬಹುಮಾನ ಪಡೆದುಕೊಂಡರೆ, ಎನ್‍ಐಟಿಕೆಯ ಶುಭಮ್ ಚಕ್ರಬೋತ್ರ್ಯಾ ಏಳನೇ ಬಹುಮಾನ ಪಡೆದುಕೊಂಡರು. ಉಜಿರೆಯ ಎಸ್‍ಡಿಎಮ್ ಕಾಲೇಜಿನ ಶಿವರಾಮ ಆಚಾರ್ಯ ಮತ್ತು ಸಿರಿ ಶರ್ಮ ಎಂಟು ಮತ್ತು ಒಂಭತ್ತನೇ ಬಹುಮಾನ ಪಡೆದುಕೊಂಡರು. ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಶಾಂತ್ ಎನ್ ಹತ್ತನೇ ಬಹುಮಾನ ಪಡೆದುಕೊಂಡರು.

ಅತ್ಯುತ್ತಮ ಮಹಿಳಾ ಆಟಗಾರರಾಗಿ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ರೂಪ, ಶಾರದಾ ಬಸ್ರೂರು ಕಾಲೇಜಿನ ಕಾವ್ಯ ಹಾಗೂ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಶಿವಶ್ರೀ ಬಹುಮಾನ ಪಡೆದುಕೊಂಡರು.