Thursday, January 23, 2025
ಸುದ್ದಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಮಣ್ಯ ನಗರ ಅಭ್ಯಾಸ ವರ್ಗ ಕಾರ್ಯಕ್ರಮ – ಕಹಳೆ ನ್ಯೂಸ್

ಸುಬ್ರಹ್ಮಣ್ಯ; ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಮಣ್ಯದ ನಗರ ಅಭ್ಯಾಸ ವರ್ಗ ಜುಲೈ 28ರಂದು ಸುಬ್ರಮಣ್ಯ ಗ್ರಾಮಪಂಚಾಯತ್ ರಾಜೀವ್ ಗಾಂಧಿ ಸಭಾಂಗಣದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಆರ್ಯಭಟ ಪುರಸ್ಕೃತ ರವಿ ಕಕ್ಕೆಪದವು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಬಿವಿಪಿ ವಿಭಾಗ ಪ್ರಮುಖ್ ಕೇಶವ ಬಂಗೇರ ವಹಿಸಿದರು. ಮುಖ್ಯ ಅತಿಥಿಯಾಗಿ ಎಬಿವಿಪಿ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಎಬಿವಿಪಿ ಸುಬ್ರಮಣ್ಯ ನಗರ ಕಾರ್ಯದರ್ಶಿ ರಕ್ಷಿತ್ ಪರಮಲೆ ಉಪಸ್ಥಿತರಿದ್ದರು. ಈ ಅಭ್ಯಾಸವರ್ಗವು ಮೂರು ಅವಧಿಗಳನ್ನು ಹೊಂದಿದ್ದು, ಮೊದಲನೇ ಅವಧಿ ಸೈಧಾಂತಿಕ ಭೂಮಿಕೆಯನ್ನು ನಾರಾಯಣ ಗುರು ಕಾಲೇಜು ಉಪನ್ಯಾಸಕ ಕೇಶವ ಬಂಗೇರ ನೆರವೇರಿಸಿದರು.

ಎರಡನೆ ಅವಧಿ ಕಾರ್ಯಪದ್ದತಿಯನ್ನು ಮಂಗಳೂರು ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೊರು ನೇವರಿಸಿದರು. ಮೂರನೇ ಅವಧಿಯನ್ನು ಕಿಶನ್ ಜಬಲೆ ಎಬಿವಿಪಿಯ ಹಿರಿಯ ಕಾರ್ಯಕರ್ತರು ನೆರವೇರಿಸಿ ಕೊಟ್ಟರು.
ಸಮಾರೋಪ ಮತ್ತು ವಿಶೇಷ ಭಾಷಣದಲ್ಲಿ ನೂತನ ಎಬಿವಿಪಿ ಘಟಕದ ಘೋಷಣೆಯನ್ನು ವಿಭಾಗ ಸಂಘಟನಾ ಕಾರ್ಯದರ್ಶಿಯಾದ ಬದವೇಶ್ ಮಾಡಿದರು. ಎಬಿವಿಪಿ ಹಿರಿಯ ಕಾರ್ಯಕರ್ತರಾದ ರಾಜೇಶ್‍ನಲ್ಲೂರಾಯ ತಮ್ಮ ವಿಚಾರಗಳನ್ನು ಮಂಡಿಸಿದರು.

ನೂತನ ಘಟಕದಲ್ಲಿ 2019-2020 ನೇ ಸಾಲಿನ ನಗರ ಕಾರ್ಯದರ್ಶಿಯಾಗಿ ಹಿತೇಶ್ ಕಟ್ರಮನೆ ಆಯ್ಕೆಯಾದರು. ಕಾಲೇಜ್ ಕೆ.ಎಸ್.ಎಸ್ ಕಾಲೇಜು ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಸಚಿನ್ ಯಂ.ಸಿ ಮತ್ತು ಕೆ.ಎಸ್.ಎಸ್ ಪಿಯೂಸಿ ಕಾಲೇಜಿನ ಕಾಲೇಜ್ ಘಟಕ ಅಧ್ಯಕ್ಷರಾಗಿ ಸಸ್ತಿಕ್ ಆಯ್ಕೆಯಾದರು.

ಈ ಕಾರ್ಯಕ್ರಮದಲ್ಲಿ ಎಬಿವಿಪಿ ಸುಳ್ಯ ತಾಲೂಕು ಸಂಚಾಲಕ ನಾಗೇಶ್ ಮಣಿಯಾಣಿ, ಎಬಿವಿಪಿ ಪ್ರಾಂತ ವಿದ್ಯಾರ್ಥಿನಿ ಪ್ರಮುಖ ಮನಿಷಾ ಪುತ್ತೂರು, ಎಬಿವಿಪಿಯ ಹಿರಿಯ ಕಾರ್ಯಕರ್ತರಾದ ಭೂಕ್ಷಿತ್, ಶ್ರೀಕುಮಾರ್ ಸುಬ್ರಮಣ್ಯ, ತೀರ್ಥ ಪ್ರಸಾದ್, ಕೌಶಲ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.