ಉತ್ತರಪ್ರದೇಶ: ಜೈ ಶ್ರೀರಾಮ್ ಎಂದು ಘೋಷಣೆ ಕೂಗಲು ನಿರಾಕರಿಸಿದ ಚಂದೌಲಿ ಜಿಲ್ಲೆಯ 15 ವರ್ಷದ ಮುಸ್ಲಿಂ ಯವಕನಿಗೆ, ನಾಲ್ವರು ಬೆಂಕಿ ಹಚ್ಚಿದ್ದಾರೆ.
ಯುವಕನನ್ನು ಕಾಶಿ ಕಬೀರ್ ಚೌರಾ ಆಸ್ಪತ್ರೆಗೆ ದಾಖಾಲಿಸಲಾಗಿದೆ. ಶೇ 60ರಷ್ಟು ದೇಹ ಸುಟ್ಟು ಹೋಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೋಲಿಸರು ತಿಳಿಸಿದರು.
ಶ್ರೀ ರಾಮ್ ಎಂದು ಘೋಷಣೆ ಕೂಗದ ಕಾರಣಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಆ ಯುವಕ ಪೋಲಿಸರಿಗೆ ಹೇಳಿಕೆ ಕೊಟ್ಟಿದ್ದು, ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೇತುವೆ ಮೇಲೆ ನಡೆದುಕೊಂಡು ಬರುತ್ತಿರುವಾಗ ನಾಲ್ವರು ನನ್ನನ್ನು ಅಪಹರಿಸಿದರು. ಇಬ್ಬರು ನನ್ನ ಕೈಗಳನ್ನು ಕಟ್ಟಿ ಹಾಕಿದರು. ಮೂರನೆಯ ವ್ಯಕ್ತಿ ನನ್ನ ಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾದರು ಎಂದು ಹೇಳಿಕೆಕೊಟ್ಟಿದ್ದಾನೆ.
ಯುವಕ ಮನೆಗೆ ತಲುಪುವಷ್ಟರಲ್ಲಿ ಆತನ ದೇಹದ ಭಾಗಗಳು ಸಾಕಷ್ಟು ಸುಟ್ಟು ಹೋಗಿದ್ದವು ಎಂದು ಪೋಲಿಸರು ತಿಳಿಸಿದರು.