ಕಡಬ: ಕಡಬ ತಾಲೂಕು ಮರಾಠಿ ಸಮಾಜ ಸೇವಾ ಸಂಘ (ರಿ.) ಕಡಬ ಇದರ ವತಿಯಿಂದ 2019-20 ಸಾಲಿನ ವಿದ್ಯಾರ್ಥಿಗಳ ಅಭಿನಂಧನಾ ಸಭೆ ಮತ್ತು ಸಂಘದ ಲಾಂಛನ ಬಿಡುಗಡೆ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕಡಬ ದುರ್ಗಾಂಬಿಕ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ 2018-19ನೇ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಅಂಕ ಪಡೆದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯ 17 ಮಕ್ಕಳನ್ನು ಗುರುತಿಸಿ ಸನ್ಮಾನಸಲಾಯಿತು. ಮತ್ತು ಕ.ರಾ.ರ.ಸಾ.ನಿದಲ್ಲಿ ಸೇವೆ ಸಲ್ಲಿಸುತ್ತಿರುವ ಅಪಘಾತ ರಹಿತ ಚಾಲನೆ ಬೆಳ್ಳಿ ಪದಕ ಪ್ರಶಸ್ತಿ ಪಡೆದ ಶೀನಾ ನಾಯ್ಕ ಕೋಡಿಂಬಾಳ ಇವರನ್ನು ಸನ್ಮಾನಿಸಲಾಯಿತು,
ಕಾರ್ಯಕ್ರಮವನ್ನು ಶಿವಪ್ಪ ನಾಯ್ಕ ಉದ್ಘಾಟಿಸಿದರು. ವಿಶೇಷ ಅತಿಥಿಗಳಾಗಿ ಜನಾರ್ಧನ ಗೌಡ ಪಣೆಮಜಲು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದುಗಾರ್ಂಬಿಕ ದೇವಸ್ಥಾನ ಕಡಬ, ಶ್ರೀಮತಿ ಗಿರಿಜಾ ಎಂ.ಕೆ, ಶಿವಪ್ರಸಾದ್ ಕೈಕುರೆ, ನೀಲಪ್ಪ ನಾಯ್ಕ್, ಈಶ್ವರ ನಾಯ್ಕ ಶಾರದೋತ್ಸವ ಸಮಿತಿ ಅಧ್ಯಕ್ಷ ಬದಿಯಡ್ಕ, ಮರಾಟಿ ಯುವ ವೇದಿಕೆ ಕೊಂಬೆಟ್ಟು ಪುತ್ತೂರು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಪಾಂಡೇಶ್ವರ ಠಾಣೆಯ ಎ.ಎಸ್.ಐ ಗಂಗಯ್ಯ ನಾಯ್ಕ ಭಾಗವಹಿಸಿದರು.
ಈಶ್ವರ ನಾಯ್ಕ ಬದಿಯಡ್ಕ ಮಾತನಾಡಿ ನಮ್ಮ ಸಂಘಕ್ಕೆ ಕೇರಳ ರಾಜ್ಯ ಮರಾಠಿ ಸಮಾಜ ಸಂಘದ ಸಂಪೂರ್ಣ ಸಹಕಾರ ಇದೆ ಎಂದು ಭರವಸೆ ನೀಡಿದರು.