ಕಡಬ : ದಕ್ಷಿಣ ಕನ್ನಡ ಹಿ.ಪ್ರಾ ಶಾಲೆ ಪಾಲೆತ್ತಡ್ಕ ಮರ್ದಾಳದಲ್ಲಿ, ದ.ಕ.ಜಿ.ಮರಾಟಿ ಸಂರಕ್ಷಣಾ ಸಮಿತಿಯ, ಕಡಬ ತಾಲ್ಲೂಕು ಘಟಕದಿಂದ ಶನಿವಾರ 27 ರಂದು ವನಮಹೋತ್ಸವ, ಗಿಡ ವಿತರಣೆ ಮತ್ತು ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಜರಗಿತು. ಶಾಲಾ ಶಿಕ್ಷಕಿ ಶ್ಯಾಮಲ ಅವರು ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮವನ್ನ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಮಹಮ್ಮದ್ ಶರೀಫ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರು, ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯವರು, ನಮ್ಮ ಶಾಲೆಯನ್ನು ಆಯ್ಕೆಮಾಡಿ ಇಂದು ವನಮಹೋತ್ಸವ ಮಾಡಿರುವುದು ನಮಗೆ ತುಂಬಾ ಸಂತೋಷದ ವಿಷಯ ಎಂದರು, ಹಾಗೆಯೇ ಪರಿಸರದ ಕಾಳಜಿಯ ಬಗ್ಗೆ ಮಾಹಿತಿ ನೀಡಿದರು.
ಶಾಲೆಯ ಶಿಕ್ಷಕರಾದ ಪ್ರವೀಣ್ ಅವರು ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜ ಮತ್ತು ಜೀಜಾಬಾಯಿಯ ಬಗ್ಗೆ ಗುಣಗಾನ ಮಾಡಿದರು. ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಬಹಳ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದೆ. ಇನ್ನೂ ಇಂತಹ ಒಳ್ಳೆಯ ಕಾರ್ಯಕ್ರಮ ನಡೆಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ, ಕಡಬ ತಾಲ್ಲೂಕು ಘಟಕದ ಅಧ್ಯಕ್ಷರಾದ ಕುಶಾಲಪ್ಪ ನಾಯ್ಕ ಅವರು ಮಾತನಾಡಿ, ನಾವು ಜಿಲ್ಲಾ ಸಮಿತಿಯ ಪರವಾಗಿ, ಕೆಲವು ಸಾಮಾಜಿಕ ಕೆಲಸಗಳನ್ನು ಆಯ್ಕೆ ಮಾಡಿಕೊಂಡಿದ್ದೆವೆ, ನಮ್ಮ ಈ ರೀತಿಯ ಸಮಾಜ ಸೇವೆ ನಿರಂತರ ಎಂದರು.
ಅಲಂಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಸುನಂದ ಅವರು ಈ ರೀತಿಯ ಒಳ್ಳೆಯ ಸಮಾಜ ಸೇವೆಗಳು ಸದಾ ನಡೆಯಲಿ ಎಂದು ಶುಭಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಆಶೋಕ್ ನಾಯ್ಕ ಕೆದಿಲ ಇವರು ಮಾತನಾಡಿ, ಈಗೀಗ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಇದರ ಬಗ್ಗೆ ನಾವೆಲ್ಲರೂ ಗಮನ ಹರಿಸಬೇಕು. ನಾವು ಸರ್ಕಾರಿ ಶಾಲೆಗಳಿಗೆ ಮಹತ್ವ ಕೊಡಬೇಕು ಮತ್ತು ಪರಿಸರದ ಕಾಳಜಿಯ ಕುರಿತು, ಮಕ್ಕಳಿಗೆ ಪರಿಸರದ ಅರಿವು ಮೂಡಿಸುವ ಉದ್ದೇಶದಿಂದ ನಾವು ನಮ್ಮ ಸಮಿತಿಯ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದೆವೆ.
ಶಾಲಾಭಿವೃದ್ದಿ ಸಮಿತಿ ವತಿಯಿಂದ ಶಾಲಾ ಶಿಕ್ಷಕರು, ಅಧ್ಯಕ್ಷರು ಹಾಗೂ ಮಕ್ಕಳ ಪೋಷಕರು ಜಿಲ್ಲಾ ಸಮಿತಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಶಿಕ್ಷಕಿ ರೇಖಾ ಅವರು ಧನ್ಯವಾದ ಸಮರ್ಪಿಸಿದರು, ಶಾಲಾ ಗುರುಗಳು ಕಾರ್ಯಕ್ರಮ ನಿರೂಪಿಸಿಸರು. ನಂತರ ಮಕ್ಕಳಿಗೆ ಸಿಹಿತಂಡಿ ವಿತರಿಸಿ, ಶಾಲೆಯ ಅವರಣದಲ್ಲಿ ಗಿಡಗಳನ್ನು ನೆಟ್ಟು ಕಾರ್ಯಕ್ರಮ ಕೊನೆಗೊಂಡಿತು. ಕಾರ್ಯಕ್ರಮದಲ್ಲಿ ಕಡಬ ಸಂಚಾಲಕರಾದ ವಾಮನ ನಾಯ್ಕ, ಸದಸ್ಯರಾದ ಪ್ರದೀಪ್, ದಿನೇಶ್, ಬಾಲಕೃಷ್ಣ ಮತ್ತು ಜಿಲ್ಲಾ ರಕ್ತನಿಧಿ ಸಂಚಾಲಕರಾದ ದಯಾಕರ್ ಪಾಲ್ತಾಡಿ ಉಪಸ್ಥಿತರಿದ್ದರು.