Wednesday, January 22, 2025
ಸುದ್ದಿ

ಮುಂಬೈಯಲ್ಲಿ ರೆಡ್ ಅಲರ್ಟ್ – ಕಹಳೆ ನ್ಯೂಸ್

ಮುಂಬಯಿ: ಮಹಾರಾಷ್ಟ್ರದಲ್ಲಿ ಜನರನ್ನು ಆತಂಕಕ್ಕೆ ನೂಕಿರುವ ವರ್ಷಧಾರೆ ಮುಂದುವರಿದಿದ್ದು, ಸೋಮವಾರವೂ ಮುಂಬೈನ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರವಿವಾರ ಹಾಗೂ ಸೋಮವಾರಕ್ಕೆ ಮುಂಬೈನ ಬಹುತೇಕ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ರವಿವಾರದ ಮಳೆಯಿಂದ ಮುರ್ಬಾದ್ ನಿಂದ ಕಲ್ಯಾಣ್‍ಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಯು ಭಾಗಶಃ ಕೊಚ್ಚಿ ಹೋಗಿದೆ. ಉಲ್ಹಾಸ್ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಬದ್ಲಾಪುರ, ತಿತ್ವಾಲಾ ಮತ್ತು ಕಲ್ಯಾಣ್‍ನಲ್ಲಿ ಪ್ರವಾಹ ಉಂಟಾಗಿದೆ. ಮುರ್ಬಾದ್‍ನಲ್ಲಿ 370 ಮನೆಗಳು ಜಲಾವೃತವಾಗಿವೆ. ಇಲ್ಲಿ ಸಿಲುಕಿರುವವರನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲು ರಕ್ಷಣಾ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜಸ್ಥಾನ, ಬಿಹಾರ, ಗುಜರಾತ್, ಅಸ್ಸಾಂನಲ್ಲೂ ವರುಣನ ಅಬ್ಬರ ಮುಂದುವರಿದಿದೆ. ರಾಜಸ್ಥಾನದಲ್ಲಿ ಮಳೆ ಸಂಬಂಧಿ ಘಟನೆಗಳಿಗೆ ಮೃತರ ಸಂಖ್ಯೆ 22ಕ್ಕೇರಿದ್ದರೆ, ಅಸ್ಸಾಂನಲ್ಲಿ 82 ಮಂದಿ ಸಾವನ್ನಪ್ಪಿದ್ದಾರೆ. ಬಿಹಾರದಲ್ಲಿ 7 ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಒಡಿಶಾದಲ್ಲಿ ಮುಂದಿನ ವಾರ ಭಾರೀ ಮಳೆಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು