Recent Posts

Tuesday, January 21, 2025
ಸುದ್ದಿ

ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ; ಅಕ್ರಮ ಬೇಟೆಗಾರರಿಬ್ಬರ ಬಂಧನ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಅರಣ್ಯ ವಿಭಾಗಕ್ಕೆ ಸೇರಿದ ದೇವರಗದ್ದೆ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಾಡು ಪ್ರಾಣಿ ಬೇಟೆಯಲ್ಲಿ ನಿರತರಾಗಿದ್ದ ನಾಲ್ಕೂರು ಗ್ರಾಮದ ಚಾರ್ಮತ ನಿವಾಸಿ ನಿವೃತ್ತ ಸೈನಿಕ ಹೊನ್ನಪ್ಪ ಚಾರ್ಮತ ಮತ್ತು ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ ರಮೇಶ ಕಲ್ಲುಗುಡ್ಡೆ ಎಂಬವರನ್ನು ಸುಬ್ರಹ್ಮಣ್ಯ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸುಬ್ರಹ್ಮಣ್ಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬಂಧಿಗಳು ಮಧ್ಯಾಹ್ನ ವೇಳೆಗೆ ಕಾಡಿನಿಂದ ಕೆಂಜಾಲಿ ಪ್ರಾಣಿ ಹೊಡೆದು ತರುತ್ತಿದ್ದಾಗ ದೇವರಗದ್ದೆ ಬಳಿ ಅವರಿಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ವೇಳೆ ತಂಡದಲ್ಲಿ ಇನ್ನಿಬ್ಬರು ಇದ್ದು ಅವರು ಪರಾರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತರು ನೀಡಿದ ಮಾಹಿತಿಯಂತೆ ಪರಾರಿಯಾದವರು, ಸುಬ್ರಹ್ಮಣ್ಯ ಮಲೆ ಹಾಗೂ ಸುಬ್ರಹ್ಮಣ್ಯ ನೂಚಿಲದವರೆಂದು ತಿಳಿದು ಬಂದಿದೆ. ಇಬ್ಬರನ್ನು ವಶಕ್ಕೆ ಪಡೆದ ಅಧಿಕಾರಿಗಳು ಅವರಿಂದ ನಾಡಕೋವಿ ಹಾಗೂ ಬೇಟೆಗೆ ಸಂಬಂಧಿಸಿದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಇಬ್ಬರನ್ನು ರಾತ್ರಿ ನ್ಯಾಯಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ. ತಲೆಮರೆಸಿಕೊಂಡ ಆರೋಪಿಗಳ ಮೇಲೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಕೆಲ ಸಮಯಗಳಿಂದ ಅರಣ್ಯದೊಳಗೆ ಕೆಲ ವ್ಯಕ್ತಿಗಳು ಬೇಟೆಯಾಡುತ್ತಿರುವ ಕುರಿತು ಸಂಶಯ ವ್ಯಕ್ತವಾಗಿತ್ತು. ಅರಣ್ಯದೊಳಗೆ ಚಲನವಲನ ನಡೆಸುತಿದ್ದುದನ್ನು ಆಧರಿಸಿ ಈ ದಾಳಿ ನಡೆಸಲಾಗಿತ್ತು. ನಾಪತ್ತೆಯಾದ ಇನ್ನಿಬ್ಬರಿಗಾಗಿ ಕಾರ್ಯಾಚರಣೆ ನಡೆಸುವುದಾಗಿ ಸುಬ್ರಹ್ಮಣ್ಯ ಅರಣ್ಯ ವಿಭಾಗದ ರೇಂಜ್ ಪಾರೆಸ್ಟರ್ ತ್ಯಾಗರಾಜ್ ಮಾಹಿತಿ ನೀಡಿದ್ದಾರೆ. ಸುಬ್ರಹ್ಮಣ್ಯ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.