ಬೆಂಗಳೂರು: 2018ರಲ್ಲಿ ದೇಶಾದ್ಯಂತ ಭರ್ಜರಿ ಸದ್ದು ಮಾಡಿದ್ದ ಕೆಜಿಎಫ್ ಸಿನಿಮಾ ತಂಡ ಸೋಮವಾರ ಕೆಜಿಎಫ್ 2ನ ಅಧೀರ ಕ್ಯಾರೆಕ್ಟರ್‍ನ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದೆ.
ಕೆಜಿಎಫ್ ತಂಡ ಸೋಮವಾರ ಬೆಳಗ್ಗೆ ಕೆಜಿಎಫ್ 2ರ ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಬಾಲಿವುಡ್‍ನ ಸಂಜಯ್ ದತ್ ಅವರ ಪೋಸ್ಟರ್‍ನ್ನು ಬಿಡುಗಡೆ ಮಾಡಿದೆ. ಕೆಜಿಎಫ್ ಚಿತ್ರದಲ್ಲಿ ಯಶ್ ಮುಖ್ಯಭೂಮಿಕೆಯಲ್ಲಿದ್ದು, ಇದೀಗ ಕೆಜಿಎಫ್ 2ರಲ್ಲಿ ಸಂಜಯ್ ದತ್ ಪಾತ್ರ ಮಾಡೋದು ಪೋಸ್ಟರ್ ನಿಂದ ಖಚಿತವಾಗಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಮೊದಲ ಭಾಗ ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಐದು ಭಾಷೆಗಳಲ್ಲಿ ಭರ್ಜರಿ ಯಶಸ್ವಿ ಕಂಡಿತ್ತು. ಗಲ್ಲಾ ಪೆಟ್ಟಿಗೆಯಲ್ಲಿ ಕೆಜಿಎಫ್ ಕೋಟ್ಯಂತರ ರೂಪಾಯಿ ಬಾಚಿತ್ತು.
ಅಧೀರ ಪಾತ್ರದ ಸಂಜಯ್ ದತ್ ಪೋಸ್ಟರ್ ನಲ್ಲಿ ನಿಗೂಢ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್‍ಗೆ ಇಂದು 60ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಕೆಜಿಎಫ್ ತಂಡ ಅಧೀರ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ.