Tuesday, January 21, 2025
ಸುದ್ದಿ

ಹುಲಿಗಳ ರಾಜ್ಯ ಕರ್ನಾಟಕ – ಕಹಳೆ ನ್ಯೂಸ್

ಮೈಸೂರು: ಕರ್ನಾಟಕ ಮತ್ತೆ ದೇಶದ ಹುಲಿಗಳ ರಾಜಧಾನಿ ಎಂಬ ಪಟ್ಟವನ್ನು ಉಳಿಸಿಕೊಂಡಿದೆ. ಕಳೆದ ವರ್ಷ ನಡೆದ ಗಣತಿಯಲ್ಲಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆ 70ಕ್ಕೂ ಹೆಚ್ಚಾಗಿದ್ದು, ಒಟ್ಟು ಸಂಖ್ಯೆ 470ಕ್ಕೂ ಹೆಚ್ಚಿದೆ.

ಸೋಮವಾರ ಹುಲಿಗಳ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಗಣತಿ ಅಂಕಿಸಂಖ್ಯೆಯನ್ನು ಬಿಡುಗಡೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಹುಲಿ ಗಣತಿ ನಡೆದಿದ್ದು 2014ರಲ್ಲಿ. ಅದರ ಪ್ರಕಾರ ದೇಶದಲ್ಲಿ 2,226 ಹುಲಿಗಳು ಇದ್ದವು. ಅದರಲ್ಲಿ 408 ಹುಲಿಗಳು ಕರ್ನಾಟಕದಲ್ಲಿದ್ದವು. ಹೀಗಾಗಿ ದೇಶದಲ್ಲಿಯೇ ಅತ್ಯಂತ ಹೆಚ್ಚು ಹುಲಿಗಳು ಇರುವ ರಾಜ್ಯ ಕರ್ನಾಟಕ ಎಂದು ಘೋಷಿಸಲಾಗಿತ್ತು. ಹಾಲಿ ಗಣತಿಯಲ್ಲಿಯೂ (2018) ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿದ್ದು, ದೇಶದಲ್ಲಿ ಮೊದಲ ಸ್ಥಾನ ನಮ್ಮದೇ ಎಂದು ಹುಲಿ ಸಂರಕ್ಷಣಾ ಯೋಜನೆ ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು