ಉಪ್ಪಿನಂಗಡಿ: ಬಜತೂರು ಗ್ರಾಮ ಕಾಂಚನದಲ್ಲಿ ಬಿಜೆಪಿ ಸದಸ್ಯರಿಂದ ವನಮಹೋತ್ಸವ ಕಾರ್ಯಕ್ರಮ ಹಾಗೂ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಯಿತು.
ಈ ಸಮಾರಂಭದಲ್ಲಿ ಮಾಜಿ ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್, ತಾಲೂಕು ಪಂಚಾಯತ್ ಸದಸ್ಯ ಮುಕುಂದ ಗೌಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೇಶವ ಗೌಡ ಪುಯಿಲ, ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷರು ಸುನಿಲ್ ದಡ್ಡು, ಕಾಂಚನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು ಹರಿಚಂದ್ರ ಮುದ್ಯ, ಗ್ರಾಮಪಂಚಾಯತ್ ಸದಸ್ಯರು ಮಾಧವ ಪೂಜಾರಿ ಓರಂಬೋಡಿ , ಹಾಗು ಎಲ್ಲಾ ಬಿಜೆಪಿ ಸದಸ್ಯರು ಪಾಲ್ಗೊಂಡು ವನಮಹೋತ್ಸವ ಕಾರ್ಯಕ್ರಮ ನಡೆಸಿದರು ಹಾಗು ಸದಸ್ಯತ್ವ ಅಭಿಯಾನ ದಲ್ಲಿ ಪಾಲ್ಗೊಂಡರು.