ಬಂಟ್ವಾಳ ತಾಲೂಕಿನ ಸಮಸ್ತ ನಾಗರೀಕರಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕರಿಂದ ವಿಶೇಷ ವಿನಂತಿ ; ನಾಗರೀಕರೇ ಗಮನಿಸಿ – ಕಹಳೆ ನ್ಯೂಸ್
ಬಂಟ್ವಾಳ: ಬಂಟ್ವಾಳ ತಾಲೂಕಿನ ಸಮಸ್ತ ನಾಗರೀಕರಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ವಿನಂತಿಯೊಂದನ್ನು ಮಾಡಿದ್ದಾರೆ. ಬಂಟ್ವಾಳ ವೃತ್ತ ಪೋಲೀಸ್ ಠಾಣೆಗಳಾದ ಬಂಟ್ವಾಳ ನಗರ, ಗ್ರಾಮಾಂತರ ಹಾಗೂ ವಿಟ್ಲ ಠಾಣೆಗಳಿಗೆ ಸಂಬಂಧಿಸಿದಂತೆ ನಿಮ್ಮ ಪರಿಸರದಲ್ಲಿ ಅನುಮಾನಾಸ್ಪದ ವಾಹನಗಳು, ಅಪರಿಚಿತರು, ಅಲೆಮಾರಿ ಜನಾಂಗದವರೆಂದು ತೋರುವ ವ್ಯಕ್ತಿಗಳು, ಅಲೆಮಾರಿ ವ್ಯಾಪಾರಿಗಳು ಮತ್ತು ಯಾವುದೇ ರೀತಿಯ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿ. ಮತ್ತು ತಮ್ಮ ಬೀಟ್ ಪೊಲೀಸರಿಗೆ ಮಾಹಿತಿಯನ್ನು ತಿಳಿಸಿ ಎಂದು ಕೋರಿದ್ದಾರೆ.
ಬಂಟ್ವಾಳ ವೃತ್ತ ನಿರೀಕ್ಷಕ: 9480805335
ಬಂಟ್ವಾಳ ನಗರ ಪೋಲೀಸ್ ಠಾಣೆ : 08255 232111
ನಗರ ಠಾಣಾ ಎಸ್.ಐ : 9480805367
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆ : 08255 235000
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ಎಸ್.ಐ.: 9480805368
ವಿಟ್ಲ ಪೊಲೀಸ್ ಠಾಣೆ: 08255239233
ಪಿಎಸ್‍ಐ ವಿಟ್ಲ ಪೊಲೀಸ್ ಠಾಣೆ : 9480805369