ಉಪ್ಪಿನಂಗಡಿ : ನಂದಿನಿನಗರದ ಕೃಷ್ಣಪ್ಪ ಪೂಜಾರಿ ಎಂಬವರು ದಿನಾಂಕ 26/7/19ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಇವರು ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿಯಲ್ಲಿ ಸಕ್ರೀಯರಾಗಿದ್ದರು.
ನಾಪತ್ತೆಯಾಗಿರುವ ಬಗ್ಗೆ ಉದ್ಯಮಿಗಳಾದ ಅಶೋಕ್ ಕುಮಾರ್ ರೈ, ಎಸ್ಟೇಟ್ ಕೋಡಿಂಬಾಡಿ ಇವರು ಹಾಗೂ ವಿಜಯ ವಿಕ್ರಮ ಕಂಬಳ ಸಮಿತಿ ಉಪ್ಪಿನಂಗಡಿ ಇದರ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರು ‘ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸಲು ನಮ್ಮ ಕಂಬಳ ಸಮಿತಿಯು ಬದ್ಧರಿದ್ದು, ಈ ಕೂಡಲೇ ಎಲ್ಲಿದ್ದರೂ ತಮ್ಮ ಮನೆಗೆ ವಾಪಸಾಗುವಂತೆ ಮನವಿ ಮಾಡಿಕೊಂಡಿದ್ದಾರೆ’. ಇನ್ನು ಮನೆ ಮಂದಿಯೂ ಕೃಷ್ಣಪ್ಪ ಅವರು ಕಾಣದೆ ನೋವಿನಲ್ಲಿದ್ದಾರೆ. ಹೀಗಾಗಿ ಈ ವ್ಯಕ್ತಿ ಎಲ್ಲಿಯಾದರೂ ಕಂಡು ಬಂದಲ್ಲಿ 8277652703 ಈ ನಂಬರ್ ಗೆ ಕರೆ ಮಾಡಿ ತಿಳಿಸಬೇಕಾಗಿ ಕೋರಲಾಗಿದೆ.