Wednesday, January 22, 2025
ಸುದ್ದಿ

ಸ್ಯಾಂಡಲ್ ವುಡ್‍ನ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ – ಕಹಳೆ ನ್ಯೂಸ್

ಸ್ಯಾಂಡಲ್ ವುಡ್ ಕಂಡ ಅಪರೂಪದ ಕಲಾವಿದರಲ್ಲಿ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಕೂಡಾ ಒಬ್ಬರು. ಈಗಾಗಲೇ ವಿವಿಧ ರೀತಿಯ ಪಾತ್ರಗಳಲ್ಲಿ ನಟಿಸಿ ಜನಸೂರೆಗೊಂಡಿರುವ ಇವರು ಬರಹಗಾರರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ‘ಭೋಜರಾಜ’ ಎಂದು ಗುರುತಿಸಿಕೊಂಡಿರುವ ಶ್ರೀನಿವಾಸ್ ಮೂರ್ತಿ ಸಿನಿಮಾರಂಗಕ್ಕೆ ಬರುವ ಮುನ್ನ ಸರ್ವೆ ಇಲಾಖೆಯಲ್ಲಿ ಉದ್ಯೋಗಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅವರ ಪ್ರಬುದ್ಧ ಅಭಿನಯ ಗಮನಿಸಿ ಪಾಂಡಿಚೇರಿ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ, ಗೌರವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹವ್ಯಾಸಿ ರಂಗಭೂಮಿಯಲ್ಲಿ ಹಲವಾರು ನಾಟಕಗಳನ್ನು ಮಾಡಿರುವ ಶ್ರೀನಿವಾಸ್ ಮೂರ್ತಿ ನಂತರ 1976 ರಲ್ಲಿ ತೆರೆ ಕಂಡ ‘ಹೇಮಾವತಿ’ ಚಿತ್ರದಲ್ಲಿ ನಟಿಸಿದರು. ಇಲ್ಲಿಯವರೆಗೂ ಅವರು ಸುಮಾರು 300 ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು