Wednesday, January 22, 2025
ಸುದ್ದಿ

ಬದುಕಿನಲ್ಲಿ ಮನನೊಂದ ತಾಯಿ ಮಕ್ಕಳು ಸಂಬಂಧಿಕರ ವಶಕ್ಕೆ – ಕಹಳೆ ನ್ಯೂಸ್

ಉಡುಪಿ : ಮಾನಸಿಕವಾಗಿ ಮನನೊಂದ ಮಹಿಳೆಯೊರ್ವಳು ತನ್ನ ಎರಡು ಮಕ್ಕಳೊಂದಿಗೆ ನೆಲೆಯಿದ್ದ ಗೋವಾ ಬಿಟ್ಟು , ಕೊನೆಗೆ ಬದುಕಿನ ದುರಂತದ ಅಂಚಿನಲ್ಲಿರುವಾಗ, ವಿಶುಶೆಟ್ಟಿ ಅಂಬಲಪಾಡಿಯವರು ಇಲಾಖೆಯ ಮೂಲಕ ತಾಯಿ ಮಕ್ಕಳನ್ನು ರಕ್ಷಿಸಿ, ಚಿಕಿತ್ಸೆ ಕೊಡಿಸಿ, 15 ದಿನಗಳ ನಂತರ ಸಂಬಂಧಿಕರಿಗೆ ಹಸ್ತಾಂತರಿಸಿದ ಮಾನವೀಯ, ಪ್ರಶಂಸನೀಯ ಘಟನೆ ಜುಲೈ 27 ರಂದು ಉಡುಪಿಯಲ್ಲಿ ನಡೆಯಿತು.

ಜುಲೈ 13 ರಂದು ಉಡುಪಿಯ ರೈಲು ನಿಲ್ದಾಣದಲ್ಲಿ ಎರಡು ಗಂಡು ಮಕ್ಕಳೊಂದಿಗೆ ದುಃಖಿಸುತ್ತಿದ್ದ ಮಹಿಳೆಯನ್ನು ಇಲಾಖೆ ಹಾಗೂ ವಿಶುಶೆಟ್ಟಿಯವರು ರಕ್ಷಿಸಿದರು. ಮಹಿಳೆಯು ತನ್ನ ಹೆಸರು ಪಾರ್ವತಿ, ತನ್ನ ಪತಿ ಮೂರು ವರ್ಷಗಳ ಹಿಂದೆಯೆ ನಿಧನರಾಗಿದ್ದಾರೆ. ನಾನು ಕೂಲಿ ಕೆಲಸವನ್ನು ಮಾಡಿ ಮಕ್ಕಳನ್ನು ಸಾಕುತ್ತಿದ್ದೆ, ಅಲ್ಲಿ ವ್ಯಕ್ತಿಯೊಬ್ಬನ ತೊಂದರೆಯಿಂದ ಮನನೊಂದಿದ್ದೇನೆ ಎಂದು ವಿವರಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನೆಲೆಗಾಗಿ ತಾಯಿಮಕ್ಕಳನ್ನು ಒಟ್ಟಿಗೆ ಇರಿಸಲು ಇಲಾಖೆಯಲ್ಲಿ ಅವಕಾಶ ಇಲ್ಲದಿರುವುದರಿಂದ ತುರ್ತು ನೆಲೆಯನ್ನು ವಿಶುಶೆಟ್ಟಿಯವರು ಕಲ್ಪಿಸಿದರು. ಮಾರನೆಯ ದಿನ ಮಹಿಳೆಯು ಇನ್ನಷ್ಡು ಗಂಭಿರವಾಗಿ ದುಃಖಿಸಿ ತೀರಾ ಮಾನಸಿಕ ರೋಗಿಯಂತಾಗಿದ್ದಾಳೆಂದು ತಿಳಿದು ಬಂತು. ಆ ಕೂಡಲೆ ವಿಶುಶೆಟ್ಟಿಯವರು ಮಹಿಳೆಯನ್ನು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದರು. ಇದೀಗ ಚಿಕಿತ್ಸೆಗೆ ಸ್ಪಂದಿಸಿದ ಮಹಿಳೆ ತಾನು, ತಾನಿರುವ ಗೋವಾಕ್ಕೆ ಹೋಗಿ ಅಲ್ಲಿಯೇ ಕೆಲಸ ಮಾಡುತ್ತೇನೆ. ಮಕ್ಕಳ ಶಿಕ್ಷಣವನ್ನು ಅಲ್ಲಿಯೇ ಮುಂದುವರೆದುತ್ತೇನೆ ಎಂದಿದ್ದಾರೆ. ಮೂಲತಃ ಬೆಳಗಾವಿಯ ಕುಟುಂಬದವರಾದ ಇವರು 15 ವರ್ಷಗಳಿಂದ ಗೋವಾದಲ್ಲಿ ಜೀವನ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ಮಹಿಳಾ ಪೋಲಿಸ್ ಠಾಣೆಯ ಪೋಲಿಸರು ಹಾಗೂ ವಿಶುಶೆಟ್ಟಿಯವರು ಬೆಳಗಾವಿಯಲ್ಲಿರುವ ಮಹಿಳೆಯ ಸಂಬಂಧಿಕರುಗಳನ್ನು ಪತ್ತೆಹಚ್ಚಿ, ಮಹಿಳೆಯ ಅತ್ತಿಗೆ ಹಾಗೂ ಮೈದುನನನ್ನು ಉಡುಪಿಗೆ ಕರೆಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆ ಹಾಗೂ ಮಕ್ಕಳು ಸಂಬಂಧಿಕರನ್ನು ಕಂಡು ಸಂತೋಷಗೊಂಡಿದ್ದಾರೆ. ನಂತರ ಪೋಲಿಸರು ಹಾಗೂ ಮಹಿಳಾ ಸಹಾಯವಾಣಿಯವರ ಉಪಸ್ಥಿತಿಯಲ್ಲಿ ತಾಯಿ-ಮಕ್ಕಳನ್ನು, ಸಂಬಂಧಿಕರು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ.