ವಳಾಲು: ಸತ್ಯನಾರಾಯಣ ಪೂಜಾ ಸಮಿತಿ ವಳಾಲು ಮುದ್ಯ (ರಿ ), ಈ ಸಂಸ್ಥೆಯವರು ಪ್ರತಿವರ್ಷ ವಿಶೇಷವಾಗಿ ಗಣೇಶೋತ್ಸವ ಸಮಾರಂಭ ನಡೆಸಿಕೊಂಡು ಬರುತಿದ್ದಾರೆ. ಈ ಬಾರಿ ಆರನೇ ವರ್ಷದ ವಿಶೇಷ ಗಣೇಶೋತ್ಸವ ಸಮಾರಂಭವನ್ನು ಮಾಡುವ ಪ್ರಯುಕ್ತ ಜುಲೈ 28ರಂದು ಎಲ್ಲಾ ಭಗವದ್ಭಕ್ತರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಸಿ, ಹೊಸದಾಗಿ ಸಮಿತಿಯೊಂದನ್ನು ರಚಿಸಿದರು.
ಈ ಸಮಿತಿಯ ಆಚರಣಾ ಸಮಿತಿ ಅಧ್ಯಕ್ಷರಾಗಿ ಶ್ರೀಯುತ ನಿವೃತ ಮುಖ್ಯ ಗುರುಗಳಾದ ಶಿವಣ್ಣ ಗೌಡ ಬಿದಿರಡಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ಪೂಜಾ ಸಮಿತಿ ಸಂಚಾಲಕರಾದ ರಾಧಾಕೃಷ್ಣ ಕುವೆಚ್ಚಾರು, ಪೂಜಾ ಸಮಿತಿ ಅಧ್ಯಕ್ಷರಾದ ತಿಮ್ಮಪ್ಪ ಗೌಡ ಒಪಾತಿಮಾಲ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೇಶವ ಗೌಡ ಪುಯಿಲ, ತಾಲೂಕು ಪಂಚಾಯತ್ ಸದಸ್ಯ ಮುಕುಂದ ಗೌಡ ನಡ್ಪ, ಬೆದ್ರೋಡಿ ಜನಸ್ಪಂದ ಸಮಿತಿಯ ವ್ಯವಸ್ಥಾಪಕರು ಸಿದ್ದಪ್ಪ ನಾಯ್ಕ್, ಬಜತೂರು ಶಾಲೆಯ ಎಸ್.ಡಿ. ಎಮ್.ಸಿ ಅಧ್ಯಕ್ಷರು ಮಹೇಂದ್ರ ವರ್ಮಾ ಪಡ್ಪು, ದೇವಸ್ಥಾನದ ವ್ಯವಸ್ಥಾಪಕರು ದಾಮೋದರ ಶೇಡಿಗುತ್ತು, ಹಾಗು ಊರ ಎಲ್ಲಾ ಭಗವದ್ಭಕ್ತರು ಪಾಲ್ಗೊಂಡರು.