ಪುತ್ತೂರು ತಲುಪಿದೆಯಂತೆ ಕುಖ್ಯಾತ ಇರಾನಿ ಗ್ಯಾಂಗ್; ಬಟ್ಟೆ ಮಾರುವ ನೆಪದಲ್ಲಿ ನಿಮ್ಮನೆಗೂ ಬರಬಹದು: ನಾಗರೀಕರೇ ಎಚ್ಚರ..! – ಕಹಳೆ ನ್ಯೂಸ್
ಪುತ್ತೂರು: ಬೆಂಗಳೂರು – ಮೈಸೂರಿನಲ್ಲಿ ಕೆಲ ತಿಂಗಳುಗಳ ಹಿಂದೆ ನಡೆಯುತಿದ್ದ ಸರಣಿ ಸರಗಳ್ಳತನದ ಬಗ್ಗೆ ನೀವು ಕೇಳಿರಬಹುದು. ಅದೊಂದು ರಾಷ್ಟ್ರೀಯ ಕುಖ್ಯಾತ ಕಳ್ಳರ ಗ್ಯಾಂಗ್. ಇರಾನಿ ಗ್ಯಾಂಗ್ ಎಂದೇ ಇದು ಜನಜನಿತ.
ಇದೀಗ ಕುಖ್ಯಾತ ಇರಾನಿ ಗ್ಯಾಂಗ್ ತಂಡದವರು ಬೆಡ್ ಶೀಟ್ ಮಾರುವ ನೆಪದಲ್ಲಿ ಪುತ್ತೂರಿನಲ್ಲೂ ಕಾರ್ಯಚರಿಸುತ್ತಿದೆ ಎಂಬ ಮಾಹಿತಿಯನ್ನು ಪೊಲೀಸರು ಎಚ್ಚರಿಸಿದ್ದಾರೆ. ಮಾರು ವೇಷದಲ್ಲಿ ಚಿಕ್ಕಮಗಳೂರು ನಗರ ಹಾಗೂ ಇನ್ನಿತರ ಕಡೆಗಳಲ್ಲಿ ಮನೆ ಮನೆಗೆ ತೆರಳಿ ದರೋಡೆ ಮಾಡಲು ಸಂಚು ರೂಪಿಸುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿರುತ್ತದೆ. ಹಾಗಾಗಿ ಸಾರ್ವಜನಿಕರು ಜಾಗೃತರಾಗಿರಬೇಕು. ಈ ರೀತಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ಕೋಡಬೇಕು ಎಂದು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ತಿಳಿಸಿದ್ದಾರೆ.