Saturday, November 16, 2024
ಸುದ್ದಿ

 ಸಹಪಾಠಿಗೆ ಬಂದೊದಗಿದ ಕ್ಯಾನ್ಸರ್‌ | ನಾಲ್ಕೇ ದಿನದಲ್ಲಿ 12 ಲಕ್ಷ ರೂ. ಸಂಗ್ರಹಿಸಿ ಕೊಟ್ಟಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳು

 

ಉಡುಪಿ: ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೌದು, ವಿದ್ಯಾರ್ಥಿಗಳು ನಾಲ್ಕೇ ದಿನದಲ್ಲಿ ಲಕ್ಷ ಲಕ್ಷ ಹಣ ಸಂಗ್ರಹಿಸಿ ಓರ್ವನ ಜೀವವನ್ನೇ ಉಳಿಸಲು ಪ್ರಯತ್ನಿಸಿರುವ ಘಟನೆ ಕುಂದಾಪುರ ತಾಲೂಕಿನ ಕೋಟ ಗ್ರಾಮದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಟದ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳೇ ಆ ಕಾರ್ಯ ಮಾಡಿರುವುದು. ಕೋಟೇಶ್ವರ ನಿವಾಸಿ ಕೂಲಿಕಾರ್ಮಿಕ ಮಂಜುನಾಥ ಕೋಪಾಡಿ ಅವರ ಮಗ ಮನೀಷ್(20) ಇದೇ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ. ಮನೀಷ್‌ ಕಳೆದ 4 ತಿಂಗಳಿನಿಂದ ನಿರಂತರ ಜ್ವರದಿಂದ ಬಳಲುತ್ತಿದ್ದ. ಕೊನೆಗೆ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಿದಾಗ ಅಸ್ಥಿ ಮಜ್ಜೆ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಕಂಡುಬಂತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೂಡಲೇ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ ಮಾಡಲು 12ಲಕ್ಷ 50ಸಾವಿರ ರೂ. ಹಣ ಬರಿಸಬೇಕೆಂದಾಗ ನಿಜಕ್ಕೂ ಪೋಷಕರು ಕಂಗಾಲಾಗಿದ್ದರು. ಆದರೆ, ಸಮಯಕ್ಕೆ ಸಹಾಯ ಹಸ್ತ ಚಾಚಿದವರು ಸಹಪಾಠಿಗಳು.

ತನ್ನ ಸ್ನೇಹಿತನನ್ನು ಉಳಿಸಿಕೊಳ್ಳಲು 2 ಅಥವಾ 3 ವಿದ್ಯಾರ್ಥಿಗಳಂತೆ 500ಕ್ಕೂ ಹೆಚ್ಚು ಮಂದಿ 40ಗುಂಪುಗಳು ಧನ ಸಂಗ್ರಹಕ್ಕೆ ತೊಡಗಿ ಉಡುಪಿ, ಕುಂದಾಪುರ, ಕೋಟ, ಗಂಗೊಳ್ಳಿ, ಮಲ್ಪೆ ಸೇರಿದಂತೆ ಜಿಲ್ಲೆಯಾದ್ಯಂತ ಮನೆ, ಶಾಲೆ, ಕಾಲೇಜು, ದೇವಸ್ಥಾನ, ಟೋಲ್‌ಗೇಟ್ ಹೀಗೆ ಯಾವುದೇ ಸ್ಥಳವನ್ನು ಬಿಡದೆ ಧನ ಸಂಗ್ರಹಿಸಿದರು. ಅಂದಹಾಗೇ ತರಗತಿಗಳಿಗೆ ರಜೆ ಹಾಕದೆ ಕೇವಲ 4 ದಿನದಲ್ಲಿ 12ಲಕ್ಷದ 60ಸಾವಿರ ರೂ. ಹಣ ಸಂಗ್ರಹಿಸಿ ಮನೀಷ್ ಕುಟುಂಬಕ್ಕೆ ನೀಡಿದ್ದಾರೆ.

ವಿದ್ಯಾರ್ಥಿಗಳ ಈ ಬೆಲೆ ಕಟ್ಟಲಾಗದ ಕೆಲಸದಿಂದ ದಿಕ್ಕೇ ತೋಚದಂತಿದ್ದ ಮನೀಷ್ ಕುಟುಂಬದಲ್ಲಿ ಮಂದಹಾಸ ಮೂಡಿದೆ.

Leave a Response