ರಾಘವೇಶ್ವರ ಶ್ರೀ ಸಾಧ್ವಿ ಪ್ರಜ್ಞಾಸಿಂಗ್ ಮಹತ್ವದ ಭೇಟಿ | ‘ ನಿಮ್ಮ ಬಳಿ ಮಠ ಇತ್ತು ನನ್ನ ಬಳಿ ದ್ವಿಚಕ್ರ ವಾಹನ ವಿತ್ತು ‘ ಅಳಲು ತೋಡಿಕೊಂಡ ಸಾಧ್ವಿ – ರಾಘವೇಶ್ವರ ಶ್ರೀ
ಬೆಂಗಳೂರು : ಮಲೆಗಾಂ ಸ್ಫೋಟದ ಆರೋಪದ ಅಡಿಯಲ್ಲಿ ಜೈಲು ಸೇರಿ, ನಂತರ ಸಧ್ಯ ಬಿಡುಗಡೆಯಾದ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಶಂಕರ ಪರಂಪರೆಯ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಭೇಟಿ ಮಾಡಿದರು.
ಭಾರಿ ಕುತೂಹಲ ಮೂಡಿಸಿತು ರಾಘವೇಶ್ವರ ಶ್ರೀ ಫೇಸ್ಬುಕ್ ಸ್ಟೇಟಸ್
” ನಿಮ್ಮ ಬಳಿ ಮಠ ಇತ್ತು; ದುಷ್ಕರ್ಮಿಗಳು ಮಠವನ್ನೇ ಷಡ್ಯಂತ್ರದ ಮಾಧ್ಯಮವಾಗಿಸಿದರು!
ನನ್ನ ಬಳಿ ಸಣ್ಣದೊಂದು ದ್ವಿಚಕ್ರವಾಹನವಿತ್ತು; ಧರ್ಮಶತ್ರುಗಳು ಅದನ್ನೇ ಷಡ್ಯಂತ್ರದ ದಾಳವಾಗಿಸಿದರು! “
ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಪ್ರಕರಣದ ಕುರಿತು ಅಳಲು ತೋಡಿಕೊಂಡರು ಎಂದು ರಾಘವೇಶ್ವರ ಶ್ರೀ ತಮ್ಮ ಫೇಸ್ ಬುಕ್ ಸ್ಟೇಟಸ್ ನಲ್ಲಿ ಹಾಕಿಕೊಂಡಿತ್ತಾರೆ.
ಈಗ ಭೇಟಿಯ ಫೋಟೋಗಳು ಮತ್ತು ಶ್ರೀಗಳ ಸ್ಟೇಟಸ್ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಭೇಟಿಯ ಉದ್ದೇಶ ಇನ್ನು ತಿಳಿದು ಬಂದಿಲ್ಲ.