Saturday, February 1, 2025
ಸುದ್ದಿ

ಮಂಗಳೂರು, ಮೂರು ಮೀನುಗಾರಿಕಾ ದೋಣಿಗಳಿಗೆ ಬೆಂಕಿ – ಕಹಳೆ ನ್ಯೂಸ್

ಮಂಗಳೂರು: ರಜೆ ಬಳಿಕ ಸಮುದ್ರಕ್ಕೆ ಇಳಿಯಲು ಸಿದ್ಧತೆ ನಡೆಸುತ್ತಿದ್ದ ಮಂಗಳೂರಿನ 3 ಹೊಸ ಬೋಟುಗಳಿಗೆ ಗುರುವಾರ ಬೆಂಕಿ ತಗುಲಿ ಸುಮಾರು 1 ಕೋ.ರೂ. ನಷ್ಟ ಸಂಭವಿಸಿದೆ.

ಮೀನುಗಾರಿಕಾ ಋತು ಆರಂಭಗೊಂಡಿದ್ದು, ದಕ್ಕೆಯಿಂದ ಬೋಟುಗಳು ಸಮುದ್ರಕ್ಕೆ ಇಳಿಯಲಾರಂಭಿಸಿವೆ. ಹೊಸ ಬೋಟುಗಳ ಫೈಬರ್ ಕೆಲಸ ಸೇರಿದಂತೆ ಕೊನೆಯ ಹಂತದ ಸಿದ್ಧತೆ ನಡೆಯುತ್ತಿತ್ತು. ಗುರುವಾರ ಸಂಜೆ ಕಾಮಗಾರಿ ನಡೆಸುತ್ತಿದ್ದ ವೇಳೆ ಒಂದು ಬೋಟ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ಬೆಂಕಿ ಇನ್ನೆರಡು ಹೊಸ ಬೋಟುಗಳಿಗೂ ವ್ಯಾಪಿಸಿತು. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು