ಬೆಂಗಳೂರು:ರಾಜ್ಯದ ತಾರಾ ಈಜುಪಟುಗಳಾದ ಶ್ರೀಹರಿ ನಟರಾಜ್ ಹಾಗೂ ಸುವನಾ ಸಿ. ಭಾಸ್ಕರ್, ಬಸವನಗುಡಿ ಈಜು ಕೇಂದ್ರದಲ್ಲಿ ಗುರುವಾರ ಮುಕ್ತಾಯವಾದ ರಾಜ್ಯ ಹಿರಿಯರ ಈಜು ಚಾಂಪಿಯನ್ಶಿಪ್ನಲ್ಲಿ ದಾಖಲೆಯೊಂದಿಗೆ ಚಿನ್ನ ಗೆದ್ದರು.
3 ದಿನಗಳ ಕೂಟದಲ್ಲಿ 14 ಈಜು ಕೇಂದ್ರಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ ಭಾಗವಹಿಸಿದ ಬಸವನಗುಡಿ ಈಜು ಕೇಂದ್ರ 374 ಅಂಕಗಳಿಸಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.
ಪುರುಷರ 50 ಮೀ. ಬ್ಯಾಕ್ ಸ್ಟ್ರೋಕ್ನಲ್ಲಿ ಶ್ರೀಹರಿ ನಟರಾಜ್ 25.63 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿದರು. ಮಹಿಳೆಯರ 50 ಮೀ. ಬ್ಯಾಕ್ ಸ್ಟ್ರೋಕ್ನಲ್ಲಿ ಸುವನಾ ಸಿ. ಭಾಸ್ಕರ್ 30.89 ಸೆಕೆಂಡ್ಗಳಲ್ಲಿ ಗುರಿ ತಲುಪಿದರು. ಪುರುಷರ 4/100 ಮೀ. ಮೆಡ್ಲೆಯಲ್ಲಿ ರಕ್ಷಿತ್, ಮಾನವ್, ಶ್ರೀಹರಿ ಹಾಗೂ ತನೀಶ್ ಅವರಿದ್ದ ತಂಡ 4 ನಿಮಿಷ 00.50 ಸೆಕೆಂಡ್ಗಳಲ್ಲಿ ಗುರಿ ತಲುಪಿತು.
ಮಹಿಳೆಯರ 4/100 ಮೀ. ಮೆಡ್ಲೆಯಲ್ಲಿ ರಿದಿಮಾ, ಸಲೋನಿ, ಮಾಳವಿಕ ಹಾಗೂ ಖುಷಿ ದಿನೇಶ್ ಅವರನ್ನೊಳಗೊಂಡ ತಂಡ 4 ನಿಮಿಷ 36.78 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ದಾಖಲೆಯೊಂದಿಗೆ ಚಿನ್ನ ಗೆದ್ದಿತು. ವಾಟರ್ಪೋಲೋ ಸ್ಪರ್ಧೆಯಲ್ಲಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಬಸವನಸಗುಡಿ ಈಜು ಕೇಂದ್ರ ಮೊದಲ ಪ್ರಶಸ್ತಿ ಗೆದ್ದರೆ, ನೆಟ್ಟಕಲ್ಲಪ್ಪ ಈಜು ಕೇಂದ್ರ ರನ್ನರ್ ಅಪ್ ಪ್ರಶಸ್ತಿ ಪಡೆಯಿತು.