Friday, January 31, 2025
ಸುದ್ದಿ

ಅಯೋಧ್ಯೆ ವಿವಾದ ಇತ್ಯರ್ಥದ ಸಂಧಾನ ವಿಫಲ, ಆ.6ರಿಂದ ನಿತ್ಯ ವಿಚಾರಣೆ: ಸುಪ್ರೀಂಕೋರ್ಟ್ – ಕಹಳೆ ನ್ಯೂಸ್

ನವದೆಹಲಿ: ಅಯೋಧ್ಯೆ ದೇವಾಲಯ ಮತ್ತು ಮಸೀದಿಗೆ ಸಂಬಂಧಿಸಿದ ವಿವಾದ ಬಗೆಹರಿಸುವಲ್ಲಿ ಯಾವುದೇ ಪರಿಹಾರ ಕಾಣದೆ ಸಂಧಾನ ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಆದೇಶ ನೀಡಿದ್ದು, ಆಗಸ್ಟ್ 6ರಿಂದ ದಶಕಗಳಷ್ಟು ಹಳೆಯದಾದ ವಿವಾದದ ವಿಚಾರಣೆಯನ್ನು ನಿತ್ಯ ನಡೆಸುವುದಾಗಿ ಘೋಷಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ಆರು ನಿಮಿಷಗಳ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ಸಂಧಾನ ಮಾತುಕತೆ ಯಾವುದೇ ರೀತಿಯ ಫಲಶ್ರುತಿ ತಂದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಜೆ ರಂಜನ್ ಗೊಗೊಯಿ ನೇತೃತ್ವದ ಸುಪ್ರೀಂ ಕೋರ್ಟ್‍ನ ಪಂಚಪೀಠ, ಸಂಧಾನ ಆಯೋಗ ವಿವಾದಕ್ಕೆ ಸಂಬಂಧಿಸಿದ ವರದಿಯನ್ನು ಸಲ್ಲಿಸಿದೆ. ಆದರೆ ವಿವಾದ ಬಗೆಹರಿಸುವ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ತಿಳಿಸಿದೆ.