Monday, January 27, 2025
ಸುದ್ದಿ

ಫಾರೆಸ್ಟ್ ಗಾರ್ಡ್ ಮಹಿಳೆಗೆ ದಂಡ ವಿಧಿಸಿದ ನಗರ ಸಂಚಾರ ಪೊಲೀಸರು –ಕಹಳೆ ನ್ಯೂಸ್

ಮಂಗಳೂರು: ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಚಲಿಸಿದ ಫಾರೆಸ್ಟ್ ಗಾರ್ಡ್ ಮಹಿಳೆಗೆ ನಗರದ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಪ್ಪಿನಂಗಡಿಯಲ್ಲಿ ಫಾರೆಸ್ಟ್ ಗಾರ್ಡ್ ಆಗಿರುವ ಈ ಮಹಿಳೆ ನಗರದ ಬಲ್ಮಠ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ಗಂಡನ ಜತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಇದನ್ನು ನೋಡಿದ ಕೆಲವರು ಮೊಬೈಲ್‍ನಲ್ಲಿ ಫೋಟೋ ತೆಗೆದು ಖಾಕಿ ಸಮವಸ್ತ್ರ ಧರಿಸಿದ ಈ ಮಹಿಳೆ ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊಬೈಲ್‍ಗಳಲ್ಲಿ ಫೋಟೋ ಹರಿದಾಡುತ್ತಿರುವುದನ್ನು ಗಮನಿಸಿ, ನಗರದ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ನಂಬರ್ ಆಧಾರದಲ್ಲಿ ಪತ್ತೆ ಕಾರ್ಯ ನಡೆಸಿದಾಗ ವಾಹನ ಬಳ್ಳಾರಿ ಮೂಲದ್ದೆಂದು ತಿಳಿದು ಬಂದಿದೆ. ಬಳಿಕ ಮಹಿಳೆಯನ್ನು ಠಾಣೆಗೆ ಕರೆಸಿ ದಂಡ ವಿಧಿಸಲಾಗಿದೆ.