ಅಯ್ಯಪ್ಪ ಭಕ್ತರ ಮೇಲೆ PFI ಮತಾಂಧರಿಂದ ದಾಳಿ ಐವರಿಗೆ ಗಂಭೀರ ಗಾಯ,ಮೂರು ಮಂದಿ PFI ಒಬ್ಬ SDPI ಮುಖಂಡನ ಮೇಲೆ ಪ್ರಕರಣ ದಾಖಲು
ಕೇರಳ : ಶಬರಿಮಲೆಯ ಅಯ್ಯಪ್ಪನ ಸನ್ನಿಧಾನದಲ್ಲಿ ಮಕರ ಜ್ಯೋತಿ ದರ್ಶನದ ಭಕ್ತಿಧಾರೆಯಲಿ ಅಯ್ಯಪ್ಪ ಭಕ್ತರು ಮಿಂದೇಳುವ ಮುನ್ನವೇ , ಮತಾಂಧ ದೂರ್ತಶಕ್ತಿಗಳಾದ PFI ಮತ್ತು SDPI ಯ ಕಾರ್ಯಕರ್ತರು ಮತಾಂಧತೆಯ ಹುಚ್ಚಿನಿಂದ , ಶಾಸ್ತಂಕೋಟೆಯ ಅನ್ನಧಾನ ಕೇಂದ್ರದ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿ , ತನ್ನ ಮತಾಂಧತೆಯ ವಿಕೃತಿಯನ್ನು ಮೆರೆದರು.
ಶಬರಿಮಲೆಯ ಅಯ್ಯಪ್ಪ ಸನ್ನಿಧಾನದಲ್ಲಿ ಅಯ್ಯಪ್ಪ ಭಕ್ತರು ಅರ್ಪಿಸುವ ಕಾಣಿಕೆಯಿಂದಲೆ ತನ್ನ ಖಜಾನೆ ತುಂಬಿಸಿಕೊಳ್ಳುವ ಕಮ್ಯುನಿಸ್ಟ್ ಸರ್ಕಾರ ಅಯ್ಯಪ್ಪ ಭಕ್ತರಿಗೆ ರಕ್ಷಣೆ ನೀಡಲು ಎಂದು ಮುಂದಾಗುವುದಿಲ್ಲ ,ಅನ್ನುವ ಜಾತ್ಯತೀತ ಸತ್ಯ ಮತ್ತೆ ಬಯಲಾಗಿದೆ , ಸರಕಾರದ ಖಜಾನೆಯಿಂದ ಹಣವನಿತ್ತು ಹಜ್ ಗೆ ಹತ್ತಿಸಲು ತನ್ನ ಹವಾನಿಯಂತ್ರಿತ KSRTC Bus ನ್ನು ವಿಮಾನನಿಲ್ದಾಣ ತನಕ ಅಟ್ಟುವ ಕಮ್ಮಿಗಳಿಗೆ ,ಅಯ್ಯಪ್ಪ ಭಕ್ತರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ .
ಮಕರ ಜ್ಯೋತಿ ದರುಶನದ ಪುಣ್ಯಕ್ಷಣಕ್ಕೆ , ಭಾರತದ ಉದ್ದಗಲದಿಂದ ಬಂದ ಅಯ್ಯಪ್ಪ ಭಕ್ತರ ಜೊತೆ ಜೊತೆಗೆ , ಇಡಿ ಕೇರಳದ ಹಿಂದೂ ಸಮಾಜ ಕೌತುಕದಿಂದ ಕಾಯುತ್ತಿತ್ತು ಮತ್ತೊಂದು ಮಂಡಲಕಾಲದ ಮಕರವಿಳಕ್ಕ್ ಗಾಗಿ , ಮಂಡಲ ಕಾಲಕ್ಕೆ ದೂರ ದೂರದಿಂದ ಹರಿದು ಬರುವ ಭಕ್ತಪ್ರವಾಹಕ್ಕೆ ಬೇಕಾದ ವ್ಯವಸ್ಥೆ ಮತ್ತು ಮತಾಂಧ ಕಿಡಿಕೇಡಿಗಳಿಂದ ಆಗುವ ಆಕ್ರಮಣಗಳಿಂದ , ರಕ್ಷಣೆಗೆ ಸರ್ಕಾರ ಜಾಣ ನಿರ್ಲಕ್ಷ್ಯ ತೋರಿಸಿದಾಗಲು ಅಲ್ಲಿಯ ಹಿಂದೂ ಸಮಾಜ ಎಚ್ಚೆತ್ತು ಅಯ್ಯಪ್ಪ ಭಕ್ತರಿಗೆ ರಕ್ಷಣೆಯ ಜೊತೆಗೆ ಊಟ -ಉಪಹಾರ ಕ್ಕೆ ಅನ್ನಧಾನ ಕೇಂದ್ರಗಳು , ಆರೋಗ್ಯ ಶಿಬಿರಗಳು ,ಸಂಚಾರಿ ವಾಹನ ರಿಪೇರಿಯ ಘಟಕಗಳು , ರಸ್ತೆಯುದ್ದಕ್ಕೂ ಮಾಹಿತಿ ಕೇಂದ್ರಗಳು ಹೀಗೆ ಸರ್ಕಾರಕ್ಕಿಂತ ಮುಂಚುಣಿಯಲ್ಲಿ ಹಿಂದೂ ಸಮಾಜ ಅಣಿಯಾಯಿತು ಅಯ್ಯಪ್ಪ ಭಕ್ತರ ಸೇವೆಗೆ ನಿನ್ನೆಯ ಮಕರ ಜ್ಯೋತಿ ದರ್ಶನದ ಪುಣ್ಯ ಕ್ಷಣವನ್ನು ಬಿತ್ತರಿಸಲು ಮಾಧ್ಯಮಗಳು ಮುಂಜಾನೆಯಿಂದಲೆ ಅಣಿಯಾಗಿದ್ದವು ,ಮಧ್ಯಾಹ್ನದ ಬಿಸಿಲು ಇಳಿಯುತ್ತಿದಂತೆ ಎಲ್ಲಾ ಮಾಧ್ಯಮ ವಾಹಿನಿಗಳು ಮಕರಜ್ಯೋತಿ ದರ್ಶನವನ್ನು ನೇರಪ್ರಸಾರ ಮಾಡಲು ಪ್ರಾರಂಭ ಮಾಡಿದವು , ಸಂಜೆಯಾಗುತ್ತಲೆ ಮಾಲಯಾಳಂ ವಾಹಿನಿಗಳ ಪರದೆ “ಸ್ವಾಮಿಯೇ ಶರಣಂ ಅಯ್ಯಪ್ಪ ” ಎಂಬ ಭಕ್ತಿಧಾರೆಯ ಉದ್ಘೋಷದಲಿ ಮುಳುಗಿದ್ದವು. ಮತಾಂಧರ ಹುಚ್ಚು ಕೆರಳಲು ಅಷ್ಟು ಸಾಕಾಗಿತ್ತೇನೊ.
ಈ ಮೊದಲೆ ಕೇರಳದ ಮತಾಂಧ ಇಸ್ಲಾಂ ಮಾನಸಿಕತೆಯ ಕಿಡಿಗೇಡಿಗಳು ಹರಿದು ಬಿಟ್ಟ ಸಂದೇಶದ ,ಮುನ್ನುಡಿಯಂತೆ ಬಾಸವಾಯಿತು ನಿನ್ನೆಯ ದಾರುಣ ಘಟನೆ ಯಾಕೆ ನೀವೂ ತ್ರೀಶೂರು ಪುರಂನಲ್ಲಿ ಸೇರುವ ಹಿಂದೂಗಳ ಮೇಲೆ ಬಾಂಬ್ ಹಾಕುವುದಿಲ್ಲ .. ಶಬರಿಮಲೆಗೆ ಹೋಗುವ ಭಕ್ತರಿಗೆ ವಿಷಮಿಶ್ರಿತ ನೀರು , ಆಹಾರ ಕೊಟ್ಟು ಸಾಯಿಸಬಹುದಲ್ಲ ಅನ್ನುವ ಸಂದೇಶ , ಹಿಂದೆ ಕೇರಳದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ರಾಷ್ಟ್ರೀಯ ವಾಹಿನಿಗಳ ತನಕ ಸುದ್ದಿ ಮಾಡಿತ್ತು .
ಅತ್ತ ಮಕರ ಜ್ಯೋತಿ ದರ್ಶನದ ಹಿಂತಿರುಗುತ್ತಿದ್ದ ಭಕ್ತರಿಗೆ ಅನ್ನಪ್ರಸಾದವನ್ನು ನೀಡಿ ಹಾಸಿವ ನೀಗಿಸುತ್ತಿದ್ದ , ಶಾಸ್ತಂಕೋಟೆಯ ಅನ್ನಧಾನ ಕೇಂದ್ರದ ಮೇಲೆ ಸಂಜೆಯಾಗುತ್ತಿದ್ದಂತೆ , SDPI ಯ ಜಿಲ್ಲಾ ವಕ್ತಾರ ಸಾಜಿದ್ ನ ವಾಹನದಲ್ಲಿ , ನುಗ್ಗಿ ಬಂದ PFI ಯ ಅನ್ಸಿಲ್ ಮತ್ತು ಹಾಸಿಂ ನ ನೇತೃತ್ವದ ಮತಾಂಧ ತಂಡ , ಮಾರಕಾಯುಧಗಳಿಂದ ಅಯ್ಯಪ್ಪ ಭಕ್ತರ ಮೇಲೆ ಯದ್ವಾತದ್ವಾ ದಾಳಿ ನಡೆಸಿ ,ಭಯದ ವಾತಾವರಣವನ್ನು ಸೃಷ್ಟಿಸಿದರು . ಐದು ಜನ ಅಯ್ಯಪ್ಪ ಭಕ್ತರಿಗೆ ಗಂಭೀರ ಗಾಯಾಗಾಳಾಗಿ ಜಿಲ್ಲಾ ಆಸ್ಪತ್ರೆಯ ತ್ರೀವನೀಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ , 30 ಕ್ಕಿಂತಲು ಹೆಚ್ಚು ಜನ ಭಕ್ತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಗಿದ್ದಾರೆ .
ಶೂರನಾಡು ಪೋಲೀಸರು ಪ್ರಕರಣ ದಾಖಲಿಸಿ , ಸರಕಾರದ ಕೃಪಾಕಟಾಕ್ಷದಲ್ಲಿರುವ ಮತಾಂಧರ ಹುಡುಕಾಟದ ನಾಟಕದಲ್ಲಿ ನಿರತರಾಗಿದ್ದಾರೆ . ಹಿಂದೂ ಐಕ್ಯವೇದಿ ನಿನ್ನೆ ಮತಾಂಧರ ಹೀನಾಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದು ,ಇಂದು ಹರತಾಳಕ್ಕೆ ಕರೆ ನೀಡಿದೆ . ಕೇರಳದಲ್ಲಿ ಮತಾಂಧತೆಯ ಹುಚ್ಚು , ರಾಜ್ಯದ ಕಮ್ಯುನಿಸ್ಟ್ ಸರಕಾರದ ನೆರಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಹಿಂದೂಗಳ ರಕ್ಷಣೆಗೆ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸ ಬೇಕು ಎನ್ನುವ ಕೂಗು ವ್ಯಾಪಕವಾಗುತ್ತಿದೆ .