Thursday, January 23, 2025
ಸುದ್ದಿ

ಸ್ತ್ರೀ ಶಕ್ತಿ ಭವನದಲ್ಲಿ ಯೋಜನಾ ಮಟ್ಟದ ವಿಶ್ವ ಸ್ತನ್ಯಪಾನ ಸಪ್ತಾಹ – ಕಹಳೆ ನ್ಯೂಸ್

ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಸ್ತ್ರೀ ಶಕ್ತಿ ಒಕ್ಕೂಟ (ರಿ.) ರೋಟರಿ ಕ್ಲಬ್ ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾ ಮಟ್ಟದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಬಿ.ಸಿ. ರೋಡಿನ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ. ಬಂಗೇರ ತಾಯಿ ಎದೆ ಹಾಲು ಮಗುವಿನ ಸವಾರ್ಂಗೀಣ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗಾಗಿ ಮಗುವಿಗೆ ತಾಯಿ ಹಾಲಿನಷ್ಟು ಸಮಾನವಾದ ಆಹಾರ ಯಾವುದು ಇಲ್ಲ, ಹಾಲಿನ ಮಹತ್ವದ ಬಗ್ಗೆ ತಿಳಿದುಕೊಂಡು ಆರೈಕೆ ಮಾಡಿ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳೆಯರಿಗೆ ಅತೀ ಮುಖ್ಯ ಮತ್ತು ಉತ್ತಮವಾದ ಕಾರ್ಯಕ್ರಮವನ್ನು ಇಲಾಖೆ ಮಾಡಿದೆ ಎಂದು ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಎದೆ ಹಾಲಿಗೆ ಇರುವ ಪ್ರಾಮುಖ್ಯತೆ ಬಗ್ಗೆ ತಾಯಂದಿರು ತಿಳಿದುಕೊಂಡಾಗ ಮಗು ಆರೋಗ್ಯವಾಗಿರಲು ಸಾಧ್ಯ. ಆರೋಗ್ಯ ಇಲಾಖೆಯ ಜೊತೆ ಇಂತಹ ಸಂಪನ್ಮೂಲ ವ್ಯಕ್ತಿಗಳ ಮಾಹಿತಿಯನ್ನು ತಾಯಂದಿರು ಪಡೆದುಕೊಂಡು ಸುಂದರ ಜೀವನ ನಡೆಸಿ ಎಂದರು. ಇಂದಿನ ದಿನಗಳಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕಾದ ಅನಿವಾರ್ಯತೆ ಇದೆ. ರೋಗದಿಂದ ದೂರವಿರಲು ಸ್ವಚ್ಚತೆ ಅತೀ ಅಗತ್ಯ ಎಂದು ಅವರು ತಿಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಹೆಣ್ಣು ಅಬಲೆಯಲ್ಲ ಸಬಲೆ, ಗಂಡು ಹೆಣ್ಣು ಎಂಬ ಬೇದಬಾವ ಇಲ್ಲದೆ ಜೊತೆಯಾಗಿ ಇದ್ದರೆ ಮಾತ್ರ ಅದು ಶ್ರೇಷ್ಠ ಎಂದರು.

ಸ್ತನ್ಯ ಪಾನದ ಬಗ್ಗೆ ಡಾ. ಶಶಿಕಲಾ ಸೋಮಯಾಜಿ ಹಾಗೂ ಡೆಂಗ್ಯೂ ಬಗ್ಗೆ ಜಯರಾಮ ಪೂಜಾರಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ ಶಿವಾಣಿ ಬಾಳಿಗಾ, ಮಹಿಳಾ ಶಕ್ತಿ ಕೇಂದ್ರದ ಜಿಲ್ಲಾ ಸಂಯೋಜಕಿ ವಿನುತಾ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ರೇವತಿ, ಸಿ.ಡಿ.ಪಿ.ಒ.ಇಲಾಖೆಯ ಮೇಲ್ವಿಚಾರಕರಾದ ನೀತಾ ಕುಮಾರಿ, ಸವಿತಾ ನವೀನ್, ಇಂದಿರಾ, ಸಾಂತ್ವನಾ ಕೇಂದ್ರದ ಗೀತಾ ಮತ್ತಿತರರು ಉಪಸ್ಥಿತರಿದ್ದರು.

ಬಂಟ್ವಾಳ ಸಿ.ಡಿ.ಪಿ.ಒ. ಗಾಯತ್ರಿ ಕಂಬಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಹಿರಿಯ ಮೇಲ್ವಿಚಾರಕಿ ಭಾರತಿ ಕುಂದರ್ ಸ್ವಾಗತಿಸಿ, ಹಿರಿಯ ಮೇಲ್ವಿಚಾರಕಿ ಉಷಾಕುಮಾರಿ ಎಂ. ವಂದಿಸಿದರು. ಮೇಲ್ವಿಚಾರಕಿ ಸರೋಜಾ ಭಟ್ ಕಾರ್ಯಕ್ರಮ ನಿರೂಪಿಸಿದರು.