ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಸರಸ್ವತೀ ವಿದ್ಯಾಲಯ ವಿದ್ಯಾನಗರ ಕಡಬ ಹಾಗೂ ಗ್ರಾಮ ವಿಕಾಸ ಸಮಿತಿ ಕೋಡಿಂಬಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ “ವೃಕ್ಷರೋಪಣ” ಕಾರ್ಯಕ್ರಮ ಕೋಡಿಂಬಾಳ ಗ್ರಾಮದ ಗಣೇಶ್ ಕುಂಡೀಲು ಇವರ ಮನೆಯಲ್ಲಿ ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಲಿಂಗಪ್ಪ ಜೆ, ಸರಸ್ವತೀ ಸಮೂಹ ಸಂಸ್ಥೆಯ ಆಡಳಿತ ಮಂಡಳಿಯ ಕೋಶಾಧಿಕಾರಿ, ಇವರು ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ನಮ್ಮ ಆರೋಗ್ಯವು ಉತ್ತಮವಾಗಿರುವುದೆಂದು ನುಡಿದರು. ಕಾರ್ಯಕ್ರಮವನ್ನು ಗಿರೀಶ್ ಗೌಡ ಸಿ ಸ್ವಾಗತಿಸಿ, ಹೊನ್ನಮ್ಮ ವಂದಿಸಿ, ವಸಂತ್ ಕೆ ನಿರೂಪಿಸಿದರು.