Wednesday, January 22, 2025
ಸುದ್ದಿ

ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ನಳನಳಿಸಿದ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಶ್ರೀರಾಮ ಶಾಲೆ ನಟ್ಟಿಬೈಲು ಸಂಸ್ಥೆಯ ಗ್ರಾಮವಿಕಾಸ ಸಮಿತಿಯ ಯೋಜನೆಯಡಿಯಲ್ಲಿ, ಜೆ.ಸಿ.ಐ ನೆಕ್ಕಿಲಾಡಿ ಘಟಕದ ಪ್ರಾಯೋಜಕತ್ವದಲ್ಲಿ, ಗ್ರಾಮ ಗ್ರಾಮಗಳಲ್ಲಿ ಗಿಡಗಳನ್ನು ನೆಡುವ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲೆಯ ವಿದ್ಯಾರ್ಥಿಗಳನ್ನು ಎರಡು ತಂಡಗಳನ್ನಾಗಿ ಮಾಡಿಕೊಂಡು ಒಂದು ತಂಡ ಹಿರೇಬಂಡಾಡಿ ಗ್ರಾಮದ ಅಲ್ತಿಮಾರು, ಮತ್ತೊಂದು ತಂಡ ಗ್ರಾಮ ವಿಕಾಸದ ದತ್ತು ಗ್ರಾಮ ಬಜತ್ತೂರ್‍ನಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಅಲ್ತಿಮಾರು ಕೊರಗಪ್ಪ ಪೂಜಾರಿ ಇವರ ಮನೆಯಲ್ಲಿ ವೃಕ್ಷಾರೋಪಣದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ವಿನೀತ್ ಶಗ್ರಿತ್ತಾಯ ಅಧ್ಯಕ್ಷರು ಜೆ.ಸಿ.ಐ ನೆಕ್ಕಿಲಾಡಿ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ ಇಂದಿನ ಹವಾಮಾನ ವೈಪರೀತ್ಯಕ್ಕೆ ಪರಿಸರ ನಾಶವೇ ಪ್ರಮುಖ ಕಾರಣ ಈ ನಿಟ್ಟಿನಲ್ಲಿ ಶ್ರೀರಾಮ ಶಾಲೆಯು ಮಕ್ಕಳಿಂದ ಪರಿಸರ ಜಾಗೃತಿ ಮೂಡಿಸುತ್ತಿರುವುದು ಒಳ್ಳೆಯ ಕಾರ್ಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮ ಮಾಡಲು ಸ್ಥಳಾವಕಾಶ ಕೊಟ್ಟ ಶ್ರೀ ಕೊರಗಪ್ಪ ಪೂಜಾರಿಯವರಿಗೆ ಜಗನ್ನಾಥ ಶೆಟ್ಟಿ ಗಿಡಗಳನ್ನು ಹಸ್ತಾಂತರಿಸಿ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಘುರಾಮ ಭಟ್.ಸಿ ಮುಖ್ಯಗುರುಗಳು ಶ್ರೀರಾಮ ಪ್ರೌಢಶಾಲೆ ವಹಿಸಿದ್ದರು. ಮುದ್ದ, ಸದಸ್ಯರು ಗ್ರಾಮ ಪಂಚಾಯತ್ ಹಿರೇಬಂಡಾಡಿ., ಜಗನ್ನಾಥ ಶೆಟ್ಟಿ, ಶ್ರೀರಾಮ ಸಂಸ್ಥೆಯ ಗ್ರಾಮವಿಕಾಸ ಸಮಿತಿಯ ಪ್ರತಿನಿಧಿ ಸುಧಾಕರ ಶೆಟ್ಟಿ, ಶ್ರೀರಾಮ ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ಶ್ರೀಮತಿ ವಿಮಲ ಉಪಸ್ಥಿತರಿದ್ದರು.

ಸಭಾಕಾರ್ಯಕ್ರಮ ನಂತರ ವಿದ್ಯಾರ್ಥಿಗಳು ಗ್ರಾಮದ ಇಪ್ಪತ್ತೈದು ಮನೆಗಳಿಗೆ ಭೇಟಿ ಮಾಡಿ ಸಾಗುವಾನಿ, ಪೇರಳೆ, ಮಾವಿನಮರ, ಗೇರು, ನೇರಳೆ, ಹಲಸಿನ ಮರ ಇನ್ನಿತರ ಹಲವಾರು ಜಾತಿಯ ಗಿಡಗಳನ್ನು ವಿದ್ಯಾರ್ಥಿಗಳು ನೆಟ್ಟರು. ಪರಿಸರ ಸಂರಕ್ಷಣೆಗಾಗಿ ಒಂದಿನಿತು ಕೈಜೋಡಿಸಿದ್ದಾಕ್ಕಾಗಿ ವಿದ್ಯಾರ್ಥಿಗಳ ಮನಸ್ಸಲ್ಲಿ ಧನ್ಯತೆಯ ಭಾವ ತುಂಬಿತ್ತು.