ತನ್ನ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರವೆಸಗಿದ ಆಪಾದನೆ ಮೇಲೆ ದೆಹಲಿಯ 29 ವರ್ಷದ ಟ್ಯೂಷನ್ ಶಿಕ್ಷಕನಿಗೆ 20 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿರುವ ದೆಹಲಿ ನ್ಯಾಯಾಲಯವೊಂದು, ಇಂಥ ಅಪರಾಧಗಳ ವಿರುದ್ಧ ಕಠಿಣಾತೀಕಠಿಣ ನಿಲುವು ಅತ್ಯಗತ್ಯ ಎಂದಿದೆ.
ರೋಶನ್ ಕುಮಾರ್ ಎಂಬ ಹೆಸರಿನ ಅಪರಾಧಿ 2017ರಲ್ಲಿ ಸಂತ್ರಸ್ತೆ ಮೇಲೆ ನಿರಂತರ ಲೈಂಗಿಕ ಅಪರಾಧವೆಸಗಿದ್ದಲ್ಲದೇ ದೈಹಿಕ ಹಲ್ಲೆಯನ್ನೂ ಎಸಗಿ ಆಕೆಯ ಆತ್ಮಗೌರವಕ್ಕೆ ಚ್ಯುತಿ ತಂದಿದ್ದಾನೆ.
ಅಪರಾಧಿಗೆ 52,000 ರೂ. ದಂಡ ವಿಧಿಸಿರುವ ನ್ಯಾಯಾಲಯ, ಸಂತ್ರಸ್ತೆಗೆ ಆರು ಲಕ್ಷ ರೂ. ಗಳ ಪರಿಹಾರ ನೀಡಲು ಸೂಚಿಸಿದೆ.